ಮಂಗಳೂರು: ಡಾ.ಅಬ್ದುಲ್ ಬಶೀರ್ ಅವರ ಮಾಲಕತ್ವದ ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಘಟಕಗಳ ಉದ್ಘಾಟನೆ ಮತ್ತು ದುವಾಃವನ್ನು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯಿದುಲ್ ಉಲಮ ಜಿಫ್ರಿ ಮುತ್ತುಕೋಯ ತಂಙಳ್ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾದ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಬಶೀರ್, ಪತ್ನಿ ತೆಕ್ಕಿಲ್ ನಸ್ರಿನ ಪಾದೂರ್, ಪುತ್ರ ಡಾ. ಶಾರುಖ್ ಮತ್ತು ಕುಟುಂಬಸ್ಥರು ಶಾಹಿದ್ ತೆಕ್ಕಿಲ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸಮಾರಂಭದಲ್ಲಿ ಇರ್ಷಾದ್ ದಾರಿಮಿ ಮಿತ್ತಬೈಲು,ಅಬ್ಬಾಸ್ ಫೈಝಿ ಪುತ್ತಿಗೆ, ಯು ಟಿ ಇಫ್ತಿಕಾರ್, ರಿಯಾಸ್ ಬಾವ, ಎಸ್ ಎಂ ಮುಸ್ತಫ, ಡಾ. ಸಚ್ಚಿದಾನಂದ ರೈ, ಹಸನಬ್ಬ ಚಾರ್ಮಾಡಿ, ಎನ್ ಎಸ್ ಕರೀಂ,ಇಸ್ಮಾಯಿಲ್ ನವಾಜ್,ಅಶ್ರಫ್ ಕಲ್ಲೇಗ,ಜಬ್ಬಾರ್ ಮಾರಿಪ್ಪಳ್ಳ,ಸಿರಾಜ್ ಮಾನಿಲ ಮೊದಲಾದವರು ಭಾಗವಹಿಸಿದರು ಡಾ. ಅಬ್ದುಲ್ ಬಶೀರ್ ಸ್ವಾಗತಿಸಿ ಡಾ. ಕಿರಾಶ್ ಪರ್ತಿಪ್ಪಾಡಿ ವಂದಿಸಿದರು.












