ಸುಳ್ಯ: ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಎನ್ಎಸ್ಎಸ್ ಹಿರಿಯ ವಿದ್ಯಾರ್ಥಿಗಳ ಸಂಘ ಎನ್ಎಸ್ಎಸ್ ಸೇವಾ ಸಂಗಮದ ವತಿಯಿಂದ 2024 ಜನವರಿ 6 ರಂದು(ಇಂದು) ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ ‘ಜನಪದ ವೈಭವ- 2024’ ಗುತ್ತಿಗಾರು ವಳಲಂಬೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಸ್ಪರ್ಧೆಗಳು ಆರಂಭವಾಗಲಿದೆ. ಸಂಜೆ ಏಳಕ್ಕೆ ನಡೆಯುವ ಸಮಾರಂಭದಲ್ಲಿ
ಕಾರ್ಯಕ್ರಮವನ್ನು ರಾಜ್ಯ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಉದ್ಘಾಟಿಸುವರು. ಜನಪದ ವೈಭವಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡುವರು. ದಶಮಾನೋತ್ಸವ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಚಾಲನೆ ನೀಡುವರು. ದಶಮಾನೋತ್ಸವ ಸಂಚಿಕೆಯ ಸಾಂಕೇತಿಕ ಅನಾವರಣವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ ಸನ್ಮಾನ ನೆರವೇರಿಸುವರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿಶ್ವನಾಥ ಬದಿಕಾನ ಪ್ರಧಾನ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ಸುಮಿತ್ರ ಮೂಕಮಲೆ, ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ ಮತ್ತಿತರರು ಭಾಗವಹಿಸಲಿದ್ದಾರೆ.
ಈ ರಾಜ್ಯಮಟ್ಟದ ಜನಪದ ವೈಭವ 2024 ಕಾರ್ಯಕ್ರಮದಲ್ಲಿ ಸುಮಾರು 15ಕ್ಕೂ ತಂಡಗಳು ಭಾಗವಹಿಸಲಿದೆ.
ಪ್ರಥಮ ಬಹುಮಾನವಾಗಿ ರೂ. 30,000/- ನಗದು ಮತ್ತು ಫಲಕ, ದ್ವಿತೀಯ ಬಹುಮಾನವಾಗಿ ರೂ. 20000/- ನಗದು ಮತ್ತು ಫಲಕ ಮತ್ತು ಆಯ್ದ ತಂಡಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ಎನ್ಎಸ್ಎಸ್ ಸೇವಾ ಸಂಗಮದ ಪದಾಧಿಕಾರಿಗಳು ತಿಳಿಸಿದ್ದಾರೆ.









