ಸುಳ್ಯ: ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಎನ್ಎಸ್ಎಸ್ ಹಿರಿಯ ವಿದ್ಯಾರ್ಥಿಗಳ ಸಂಘ ಎನ್ಎಸ್ಎಸ್ ಸೇವಾ ಸಂಗಮದ ವತಿಯಿಂದ
ರಾಜ್ಯಮಟ್ಟದ ಜನಪದ ರೂಪಕಗಳ ಸ್ಪರ್ಧೆ ‘ಜನಪದ ವೈಭವ- 2024’ ಗುತ್ತಿಗಾರು ವಳಲಂಬೆ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಶಾಲಾ ವಾರ್ಷಿಕೋತ್ಸವ ಮತ್ತು

ಸೇವಾ ಸಮ್ಮಿಲನದ ಅಂಗವಾಗಿ ಜನಪದ ವೈಭವ ಹಮ್ಮಿಕೊಳ್ಳಲಾಗಿತ್ತು.ಈ ರಾಜ್ಯಮಟ್ಟದ ಜನಪದ ವೈಭವ 2024ದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ತಂಡಗಳು ವೈವಿಧ್ಯಮಯ ಆಕರ್ಷಕ ಜನಪದ ನೃತ್ಯ ರೂಪಕಗಳನ್ನು ಪ್ರಸ್ತುಪಡಿಸಿದರು.











