ಸುಳ್ಯ:ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಎಸ್ಕೆಎಸ್ಎಫ್ ಸುಳ್ಯ ಕ್ಲಸ್ಟರ್ ವತಿಯಿಂದ ನಡೆದ ಮಾದಕ ವ್ಯಸನದ ವಿರುದ್ಧದ ಯುವ ಜನ ಸಂಚಲನ ಕಾರ್ಯಕ್ರಮ ನಡೆಯಿತು “ದಾರಿ ತಪ್ಪುತ್ತಿರುವ ಯುವ ಜನಾಂಗದ ಆರೋಗ್ಯ ಕರ್ನಾಟಕಕ್ಕೆ ಯುವ ಜನ ಜಾಗೃತಿ” ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ಎಸ್ಕೆಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 35 ಕ್ಲಸ್ಟರ್ ಗಳಲ್ಲಿ ಏಕ ಕಾಲಕ್ಕೆ ನಡೆಸಿದ ಜನಜಾಗೃತಿ
ಕಾರ್ಯಕ್ರಮ ಅರಂಬೂರು ಬದ್ರ್ ಜುಮ್ಮಾ ಮಸೀದಿ ಮುಂಭಾಗ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ‘ ಮಾದಕ ವ್ಯಸನದ ವಿರುದ್ಧದ ಜನಜಾಗೃತಿ ಪ್ರತಿ ಮನೆ ಮನೆಗಳಲ್ಲಿ ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಕ್ಲಸ್ಟರ್ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಿದ್ದೀಕ್ ಜೀರ್ಮುಕ್ಕಿ ವಹಿಸಿದ್ದರು. ಪೇರಡ್ಕ ಮೊಹಿಯುದ್ದಿನ್ ಜುಮಾ ಮಸೀದಿ ಖತೀಬರಾದ ರಿಯಾಝ್ ಫೈಝಿ ದುವಾಶೀರ್ವಚನಗೈದರು. ಸ್ವಾದಿಕ್ ಕಲ್ಲೋಣಿ ಮಾದಕ ದ್ರವ್ಯದ ಆಂದೋಲನದ ಉದ್ದೇಶವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ
ಬದರ್ ಜುಮಾ ಮಸೀದಿ ಅರಂಬೂರು ಅಧ್ಯಕ್ಷ ಹಾಜಿ ಭಾಷಾ ಸಾಹೇಬ್, ಸುನ್ನಿ ಮಹಲ್ ಫೆಡರೇಷನ್ ಅಧ್ಯಕ್ಷ ಹಮೀದ್ ಹಾಜಿ, ಆಲೆಟ್ಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್,ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ, ಬಾಪು ಸಾಹೇಬ್ , ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಹಮೀದ್ ಹಾಜಿ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಸುಳ್ಯ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಎಂ ಜೆ ಎಂ ಪೆರಡ್ಕ ಇದರ ಅಧ್ಯಕ್ಷರಾದ ಎಸ್ ಆಲಿ ಹಾಜಿ ಕಲ್ಲುಗುಂಡಿ, ಶಾಫಿ ಕುತ್ತಮೊಟ್ಟೆ, ಅರಂಬೂರು ಮಸೀದಿ ಪ್ರಾಧ್ಯಾಪಕರಾದ ಬಶೀರ್ ಮುಸ್ಲಿಯಾರ್, ಎಸ್ ಕೆ ಎಸ್ ಎಸ್ ಎಫ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಕರಾವಳಿ, ಕೋಶಾಧಿಕಾರಿ ಅಬ್ದುಲ್ ರಝಾಕ್ ಕರಾವಳಿ, ಸುಳ್ಯ ವಲಯ ಕಾರ್ಯದರ್ಶಿ ಆಶಿಕ್ ಸುಳ್ಯ , ಎಂ ಜೆ ಎಂ ಪೇರಡ್ಕದ ಕಾರ್ಯದರ್ಶಿ ಟಿ ಎಂ ರಝಾಕ್ ಹಾಜಿ, ಅರಂತೋಡು ಬದ್ರಿಯಾ ಜುಮಾ ಮಸೀದಿಯ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು. ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ಸ್ವಾಗತಿಸಿ ವಂದಿಸಿದರು. ನಾಸಿರ್ ಪಾಲಡ್ಕ ಪ್ರತಿಜ್ಞಾ ವಿಧಿ ಬೋಧಿಸಿದರು.