ಬೆಳ್ಳಾರೆ:ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಓಣಂ ಆಚರೇ ನಡೆಯಿತು. ಸಂಸ್ಥೆಯ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಆಕರ್ಷಕ ಪೂಕಳಂ ರಚಿಸಿ, ತಿರುವಾದಿರ ನೃತ್ಯ ಪ್ರದರ್ಶನ ನೀಡಿದರು. ಉಪನ್ಯಾಸಕ
ಅಚ್ಚುತ್ತ ಅಟ್ಲೂರು ದೀಪ ಬೆಳಗಿಸಿ ಓಣಂ ಆಚರಣೆಯ ಮಹತ್ವ ವನ್ನು ತಿಳಿಸಿದರು. ವೇದಿಕೆಯಲ್ಲಿ ಉಪನ್ಯಾಸಕರುಗಳಾದ ಚಂದ್ರಶೇಖರ ಆಲೆಟ್ಟಿ ,ಶರತ್ ಕಲ್ಲೋಣಿ ,ಗಣೇಶ ನಾಯಕ್ ಪುತ್ತೂರು ,ಉಪನ್ಯಾಸಕಿಯರುಗಳಾದ ಗೀತಾ ಬಾಲಚಂದ್ರ ,ಬೃಂದಾ ಕುಂಜಾಡಿ ಉಪಸ್ಥಿತರಿದ್ದರು. ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿ ಹರ್ಷಿತಾ ಸ್ವಾಗತಿಸಿ , ದೀಪಿಕಾ ಪ್ರಾಸ್ತಾಪಿಸಿದರು. ಗುಣಶ್ರೀ ವಂದಿಸಿದರು. ಪೂರ್ಣಿಮ ಕಾರ್ಯಕ್ರಮ ನಿರ್ವಹಿಸಿದರು