ಸುಳ್ಯ:ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ನೂತನ ಕಚೇರಿ ಸುಳ್ಯದ ಅನ್ಸಾರ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾರಂಭ ಮಾಡಿತು. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಹಾಗು ವಕೀಲ ಕುಂಞಿ ಅಬ್ದುಲ್ಲ ಉದ್ಘಾಟನೆ ನೆರವೇರಿಸಿದರು. ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್ ಅಧ್ಯಕ್ಷತೆ ವಹಿಸಿದ್ದರು. ಕಚೇರಿ ಉದ್ಘಾಟಿಸಿ ಮಾತನಾಡಿದ
ಟಿ ಎಂ ಶಾಹಿದ್ ತೆಕ್ಕಿಲ್ ಸುಳ್ಯದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ ಸರಕಾರ ಮಟ್ಟದಲ್ಲಿ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದರು.ಕೆಎಎಸ್, ಐಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರ ಸುಳ್ಯದಲ್ಲಿ ಸ್ಥಾಪಿಸಿದರೆ ತೆಕ್ಕಿಲ್ ಪ್ರತಿಷ್ಟಾನದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು. ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಕೆ ಕೆ ವಿದ್ಯಾರ್ಥಿ ವೇತನ ವಿತರಿಸಿದರು. ಸಮಾರಂಭದಲ್ಲಿ ಎಸ್ ಶಂಸುದ್ದಿನ್, ಕೆ.ಎಂ.ಮುಸ್ತಫ, ಪಿ ಎ ಮಹಮ್ಮದ್, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್ ಕೆ ಹನೀಫ್ ಸಂಪಾಜೆ, ಮಹಮ್ಮದ್ ಕುಂಞಿ ಗೂನಡ್ಕ , ಜಿ ಕೆ ಹಮೀದ್ ಗೂನಡ್ಕ, ಶರೀಫ್ ಕಂಠಿ, ಹಾಜಿ ಅಬ್ದುಲ್ ಶುಕೂರ್, ಶಾಹುಲ್ ಹಮೀದ್ ಕುತ್ತಮಟ್ಟೆ, ಮೂಸ ಕುಂಞಿ ಪೈಂಬೆಚ್ಚಾಲ್, ಎಂ, ಅಬೂಬಕ್ಕರ್ ಅಡ್ಕಾರ್, ಹಾಜಿ ಮೊಹಿದ್ದೀನ್ ಫ್ಯಾನ್ಸಿ ಮೊದಲಾದವರು ಭಾಗವಹಿಸಿದರು.