ಸುಳ್ಯ: ಸುಳ್ಯ ತಾಲೂಕು ಜಮೀಯತುಲ್ ಫಲಾಹ್ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ಹಸೈನಾರ್ ಹಾಜಿ ಗೋರಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಹಸೈನಾರ್ ವಳಲಂಬೆ ವರದಿ ವಾಚಿಸಿ, ಲೆಕ್ಕ ಪತ್ರಗಳನ್ನು ಮಂಡಿಸಿದರು. ವೀಕ್ಷಕರಾಗಿ ಪುತ್ತೂರು ತಾಲೂಕು ಜಮ್ಯಿಯುತ್ತುಲ್ ಫಲಾಹ್ ಕೋಶಾಧಿಕಾರಿ ಉಮ್ಮರ್ ಕರಾವಳಿ ಹಾಗೂ
ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್,
ಪ್ರಧಾನ ಕಾರ್ಯದರ್ಶಿ ಅಶ್ರಫ್ ಕೊಟ್ಯಾಡಿ ಆಗಮಿಸಿದ್ದರು. ಸಭೆಯಲ್ಲಿ 2023-24 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷರಾಗಿ ನ್ಯಾಯವಾದಿ ಫವಾಝ್ ಕನಕಮಜಲು, ಶಾಫಿ ಕುತ್ತಮೊಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಮೂಸಾಕುಂಞಿ ಪೈಂಬೆಚ್ಚಾಲ್, ಜತೆಕಾರ್ಯದರ್ಶಿಯಾಗಿ ಎಸ್.ಕೆ ಹನೀಫ್ ಕಲ್ಲುಗುಂಡಿ, ಕೋಶಾಧಿಕಾರಿಯಾಗಿ ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್,
ಮೂಸಾಕುಂಞಿ ಪೈಂಬೆಚ್ಚಾಲ್,
ಅಬೂಬಕ್ಕರ್ ಅಡ್ಕಾರ್
ಪತ್ರಿಕಾ ಕಾರ್ಯದರ್ಶಿಯಾಗಿ ಅಮೀರ್ ಕುಕ್ಕುಂಬಳ ಹಾಗೂ ನಿರ್ದೇಶಕರಾಗಿ ಹಾಜಿ ಅಬ್ಬಾಸ್ ಸೆಂಟ್ಯಾರ್, ಹಸೈನಾರ್ ವಳಲಂಬೆ, ಹಾಜಿ ಮೊಯಿದೀನ್ ಪ್ಯಾನ್ಸಿ, ಎಸ್.ಎಂ ಅಬ್ದುಲ್ ಮಜೀದ್, ಬಶೀರ್ ಯು.ಪಿ, ಇಬ್ರಾಹಿಂ ನೀರ ಬಿದಿರೆ ದುಗ್ಗಲಡ್ಕ, ಡಾ. ಮಹಮ್ಮದ್ ಕುಂಞಿ, ಅಬ್ದುಲ್ ಖಾದರ್ ಪಠೇಲ್, ಬದ್ರುದ್ದೀನ್ ಪಠೇಲ್, ರಜಾಕ್ ಎಣ್ಮೂರು, ಸಿದ್ದೀಕ್ ಕಟ್ಟೆಕ್ಕಾರ್, ಎಸ್.ಇ. ಜುಬೈರ್, ರಿಯಾಝ್ ಕಟ್ಟೆಕ್ಕಾರ್ ಆಯ್ಕೆಯಾದರು.