ಸುಳ್ಯ:ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ 2024-25ನೇ ಸಾಲಿನ ಮಹಾಸಭೆ ಸುಳ್ಯ ಜಮೀಯ್ಯತುಲ್ ಫಲಾಹ್ ಕಛೇರಿ ಬಳಿಯ ಅನ್ಸಾರ್ ಸಭಾಂಗಣದಲ್ಲಿ ನಡೆಯಿತು.ಕೇಂದ್ರ ಘಟಕದಿಂದ ನೇಮಿಸಲ್ಪಟ್ಟ ವೀಕ್ಷಕರಾಗಿ ಬೆಳ್ತಂಗಡಿ ಘಟಕದ ಪ್ರಧಾನ ಕಾರ್ಯದರ್ಶಿ ಅಲಿಯಬ್ಬ ಪುಲಾಬೆ ಹಾಗೂ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ಭಾಗವಹಿಸಿದ್ದರು.ಅಧ್ಯಕ್ಷ ಅಬೂಬಕ್ಕರ್ ಪಾರೆಕಲ್ಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಕಾರ್ಯದರ್ಶಿ ಮೂಸ ಕುಂಞಿ ಪೈಂಬೆಚ್ಚಾಲ್ ವರದಿ ವಾಚಿಸಿದರು. ಲೆಕ್ಕಪತ್ರವನ್ನು ಅಬೂಬಕ್ಕರ್ ಜೆ.ಎನ್. ಮಂಡಿಸಿದರು.
ನೂತನ ಸಮಿತಿ ರಚಿಸಲಾಗಿ 21 ಸದಸ್ಯರನ್ನು ಅವಿರೋಧವಾಗಿ ಆರಿಸಲಾಯಿತು. ಆ 21 ಸದಸ್ಯರಲ್ಲಿ 8 ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.2025-27 ಸಾಲಿನ ನೂತನ ಅಧ್ಯಕ್ಷರಾಗಿ ಮೂಸ ಕುಂಞಿ ಪೈಂಬಚ್ಚಾಲ್, ಕಾರ್ಯದರ್ಶಿಯಾಗಿ ಹಸೈನಾರ್ ವಲಳಂಬೆ,
ಕೋಶಾಧಿಕಾರಿ ಶಾಫಿ ಕುತ್ತಮೊಟ್ಟೆ ಆಯ್ಕೆಯಾದರು.

ಮೂಸ ಕುಂಞಿ ಪೈಂಬೆಚ್ಚಾಲ್, ಹಸೈನಾರ್ ವಲಳಂಬೆ, ಶಾಫಿ ಕುತ್ತಮೊಟ್ಟೆ,
ಉಪಾಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಕತ್ತಾರ್, ಅಬ್ಬುಲ್ ಖಾದರ್ ಸಂಗಮ್, ಜೊತೆ ಕಾರ್ಯದರ್ಶಿಯಾಗಿ ಅಮೀರ್ ಕುಕ್ಕುಂಬಳ, ಸಂಘಟನಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಜೆ.ಎನ್., ಪತ್ರಿಕಾ ಕಾರ್ಯದರ್ಶಿಯಾಗಿ ಹಂಝ ಅಜ್ಮೀರಿಯ, ಸದಸ್ಯರಾಗಿ ಅಬೂಬಕ್ಕರ್ ಪಾರೆಕಲ್ಲು,ಇಕ್ಬಾಲ್ ಎಲಿಮಲೆ,ಅಬ್ಬಾಸ್ ಸೆಂಟ್ಯಾರ್,
ಡಾ.ಮಹಮ್ಮದ್ ಕುಂಬಕ್ಕೋಡ್, ಹಸೈನಾರ್ ಹಾಜಿ ಗೋರಡ್ಕ, ಜುಬೈರ್,ಹನೀಫ್ ಎಸ್.ಕೆ.,ಹಂಝ ದುಗಲಡ್ಕ,ಇಬ್ರಾಹಿಂ ನೀರಬಿದಿರೆ,ರಜಾಕ್ ಎಣ್ಮೂರು,ಮಹಮ್ಮದ್ ಫವಾಜ್,ಮುಸ್ತಾಪ ಜನತಾ,ಅಬೂಬಕ್ಕರ್ ಎಸ್.ಪಿ. ಆಯ್ಕೆಯಾದರು.





