ಜಾಲ್ಸೂರು:ಜಾಲ್ಸೂರಿನ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳ ಕುರಿತಂತೆ ಭಕ್ತಾದಿಗಳ ವಿಶೇಷ ಸಭೆ ಮಂದಿರದ ಸಭಾಂಗಣದಲ್ಲಿ ನಡೆಯಿತು.ಭಜನಾ ಮಂದಿರದ ಗೌರವಾಧ್ಯಕ್ಷ ಮೋಹನ್ ನಂಗಾರು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಭಜನಾ ಮಂದಿರದ
ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಕಾರ್ಯದರ್ಶಿ ಆತ್ಮರಾಮ ಗಬಲಡ್ಕ ಉಪಸ್ಥಿತರಿದ್ದರು. ಕಮಲಾಕ್ಷ ನಂಗಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹಲವು ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ಭಜನಾ ಮಂದಿರದ ಅಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು.ಅಭಿವೃದ್ಧಿ ಸಮಿತಿಯ ನೂತನ
ಗೌರವಾಧ್ಯಕ್ಷರುಗಳಾಗಿ ಸುಧಾಕರ ಕಾಮತ್ ವಿನೋಬನಗರ, ರಾಮಕೃಷ್ಣ ಭಟ್ ಪೆರುoಬಾರು, ಗೋಪಾಲಕೃಷ್ಣ ಪ್ರಭು, ಅಧ್ಯಕ್ಷರಾಗಿ ಎ.ಕೆ ಉಮಾನಾಥ ಪಟೇಲ್ ಮನೆ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಮಣಿಯಾಣಿ ಮರಸಂಕ, ಕೋಶಾಧ್ಯಕ್ಷರಾಗಿ ಮಾಧವ ಗೌಡ ಕಾಳಮನೆ, ಪ್ರಧಾನ ಸಂಯೋಜಕರಾಗಿ ಕಮಲಾಕ್ಷ ನಂಗಾರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹೇಮಚಂದ್ರ ಕದಿಕಡ್ಕ, ಗಣೇಶ್ ರೈ ಕುರಿಯ, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಕದಿಕಡ್ಕ, ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಪ್ರಸಾದ್ ಭಟ್ ಪೆರುಂಬಾರು, ಜೆ.ಕೆ ರಮೇಶ್ ಗೌಡ ಕಾಳಮ್ಮನೆ, ತಿಮ್ಮಯ್ಯ ಆಚಾರ್ಯ, ಮಾಧವ ಗೌಡ ದೇವಿಕಾ, ಶಿವಪ್ಪ ಕಜೆಗದ್ದೆ, ಚಿನ್ನಪ್ಪ ಗೌಡ ಬದಿಯಡ್ಕ, ವಿಶ್ವನಾಥ ಕದಿಕಡ್ಕ, ರೆದೀಶ್ ಬೇರ್ಪಡ್ಕ, ಸತೀಶ್ ಕೆಮನಬಳ್ಳಿ, ಶ್ರೀಮತಿ ಹೇಮಾವತಿ ಭಾಸ್ಕರ ಪಟೇಲ್ ಮನೆ,ವಿಶಾಲಾಕ್ಷಿ ರವಿರಾಜ್ ಕದಿಕಡ್ಕ, ರುಕ್ಮಿಣಿ ನಾರಾಯಣ ಗೌಡ, ವೇದಾವತಿ ಬಾಬು ಪಾಟಾಳಿಯವರನ್ನು ಆಯ್ಕೆ ಮಾಡಲಾಯಿತು.










