ಪೆರುವಾಜೆ: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದ್ದು ಜು.10 ರಂದು ದಡೆ ಮೂಹರ್ತ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಪೂಜೆ ಕಾರ್ಯಕ್ರಮ ನೆರೆವೇರಿಸಿದರು. ಈ ಸಂದರ್ಭ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ, ಸದಸ್ಯರಾದ ವೆಂಕಟಕೃಷ್ಣ ರಾವ್ ,ನಾರಾಯಣ ಕೊಂಡೆಪ್ಪಾಡಿ,ಹಾಗೂ.ಕಾಷ್ಟಾ ಶಿಲ್ಪಿಗಳಾದ ಹರೀಶ್ ಆಚಾರ್ಯ ಬೊಲಿಯಾರು,ಸಂತೋಷ್ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಮತ್ತು ಭೋಜರಾಜ್ ಶೆಟ್ಟಿ ಕಲ್ಕಂಪಾಡಿಗುತ್ತು,ದೇವದಾಸ್ ಶೆಟ್ಟಿ, ದೇವರಮಾರ್,ಪ್ರೀತಮ್ ರೈ ಪೆರುವಾಜೆ,ಸುದಾನಂದ ಪೆರುವಾಜೆ, ಗಣೇಶ್ ಪೂಜಾರಿ ಕೊಲ್ಯ, ಸುಜಾತ ಪದ್ಮನಾಭ ಶೆಟ್ಟಿ, ವಿಠಲ ಶೆಟ್ಟಿ, ಗುರು ಆಚಾರ್ಯ, ರವಿ ಪೆರುವಾಜೆ, ದೇವಾಲಯದ ಸಿಬ್ಬಂದಿ ವಸಂತ ಆಚಾರ್ಯ ಮತ್ತು ಇತರರು ಉಪಸ್ಥಿತರಿದ್ದರು.