ಸುಳ್ಯ:ಕೃಷಿಕರೇ ಸೇರಿ ಕೃಷಿ ಉತ್ಪನ್ನ ಖರೀದಿ ಕೇಂದ್ರ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಲಾಭ ಉಂಟಾಗಲಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಹೇಳಿದ್ದಾರೆ.ಸುಳ್ಯ ಗಾಂಧಿನಗರದ ಕಲ್ಕುಡ ಕಟ್ಟೆಯ ಮುಂಭಾಗದ ವಾಣೀಜ್ಯ ಸಂಕೀರ್ಣದಲ್ಲಿ ನೂತನವಾಗಿ ಆರಂಭಗೊಂಡ ‘ಜೈ ಕಿಸಾನ್ ಟ್ರೇಡರ್ಸ್’ ಕೃಷಿ ಉತ್ಪನ್ನ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಮಾರುಕಟ್ಟೆ

ಕ್ಷೇತ್ರದಲ್ಲಿ ಈ ರೀತಿಯ ಪ್ರಯತ್ನಗಳು ಹೆಚ್ಚು ನಡೆಯಬೇಕು. ಆಗ ಕೃಷಿಕರ ಉತ್ಪನ್ನಗಳಿಗೆ ಉತ್ತಮ ಧಾರಣೆ ದೊರೆಯಲು ಮತ್ತು ಕೃಷಿಕರಿಗೆ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ. ಸರಕಾರಕ್ಕೆ ಸರಿಯಾಗಿ ತೆರಿಗೆ ಪಾವತಿಸುವ ಮೂಲಕ ಪಾರದರ್ಶಕ ಮತ್ತು ಜನ ಸ್ನೇಹಿ ಉದ್ಯಮಗಳು ಹೆಚ್ಚು ಬೆಳೆಯಬೇಕು ಎಂದು ಅವರು ಹೇಳಿದರು.
ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಹಿರಿಯ ಉದ್ಯಮಿ ಕೃಷ್ಣ ಕಾಮತ್, ಪದಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್,ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪ್ರಗತಿಪರ ಕೃಷಿಕರಾದ ಶಿವರಾಮ ಗೌಡ ಮಾಣಿಬೆಟ್ಟು, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ . ಜಯರಾಮ, ಭಾರತೀಯ ರಬ್ಬರ್ ಮಂಡಳಿಯ ನಿರ್ದೇಶಕ ಮುಳಿಯ ಕೇಶವ ಭಟ್, ನ.ಪಂ. ಮಾಜಿ ಅಧ್ಯಕ್ಷರು ಹಾಗು ಜೈ ಕಿಸಾನ್ ಟ್ರೇಡರ್ಸ್ ಕಟ್ಟಡದ ಮಾಲಕ ಕೆ.ಪ್ರಕಾಶ್ ಹೆಗ್ಡೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ

ಅಧ್ಯಕ್ಷ ಪಿ.ಕೆ.ಉಮೇಶ್, ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀಪತಿ ಭಟ್, ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ , ಪ್ರಗತಿಪರ ಕೃಷಿಕ ದೇರಣ್ಣ ಗೌಡ ಅಡ್ಡಂತಡ್ಕ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಉದ್ಯಮಿ ಸುಧಾಕರ ಕಾಮತ್, ಪ್ರಗತಿಪರ ಕೃಷಿಕರಾದ ಭಾಸ್ಕರ ರಾವ್ ಬಯಂಬು, ಮಧುಸೂದನ್ ಕುಂಭಕ್ಕೋಡು, ಡಾ.ಎನ್.ಎ.ಜ್ಞಾನೇಶ್, ಪ್ರದ್ಯುಮ್ನ ಉಬರಡ್ಕ,

ಖ್ಯಾತ ವೈದ್ಯರು ಹಾಗು ಕೃಷಿಕರಾದ ಡಾ.ಕೇಶವ ಪಿ.ಕೆ, ಪೇರಾಲು ಬಜಪಿಲ ಶ್ರೀ ಉಳ್ಳಾಕುಲು ಕ್ಷೇತ್ರದ ಮೊಕ್ತೇಸರ ಹೇಮಂತ್ ಗೌಡ, ಸುಳ್ಯ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ, ಉದ್ಯಮಿ ಮುಕುಂದ ನಾರ್ಕೋಡು, ಶಶಿ ಕಾಂಪ್ಲೆಕ್ಸ್‌ನ ಮಾಲಕ ಶಶಿಧರ, ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್ .ಗಿರೀಶ್, ಸಿಎ ಬ್ಯಾಂಕ್ ನಿರ್ದೇಶಕ ಎ.ಎಸ್.ಮನ್ಮಥ, ಲೋಕೇಶ್, ಅತಿಥಿಗಳಾಗಿ ಭಾಗವಹಿಸಿದ್ದರು. ಜೈ ಕಿಸಾನ್ ಟ್ರೇಡರ್ಸ್‌ನ ಪಾಲುದಾರರಾದ ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ ಪ್ರಾಸ್ತಾವಿವಾಗಿ ಮಾತನಾಡಿದರು. ವಿಕ್ರಮ್ ಅಡ್ಪಂಗಾಯ ವಂದಿಸಿದರು. ಪಾಲುದಾರರಾದ ನವೀನ್ ಕುಮಾರ್ ಮೇನಾಲ, ತೀರ್ಥಕುಮಾರ್ ಕುಂಚಡ್ಕ ಉಪಸ್ಥಿತರಿದ್ದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
