ಸುಳ್ಯ: ಸುಳ್ಯದ ಗಾಂಧಿನಗರದಲ್ಲಿ ನೂತನವಾಗಿ ಪ್ರಾರಂಭವಾದ ಜೈ ಕಿಸಾನ್ ಟ್ರೇಡರ್ಸ್‌ಗೆ ಕೃಷಿ ಉತ್ಪನ್ನ ಖರೀದಿ ಕೇಂದ್ರಕ್ಕೆ ಅಕಾಡೆಮಿ ಆಫ್ ಲಿಬರಲ್ ಎಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರು ಭೇಟಿ
ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಡಾ.ರೇಣುಕಾ ಪ್ರಸಾದ್ ಕೆ.ವಿ. ಅವರನ್ನು ಅಭಿನಂದಿಸಿದರು. ಅಲ್ಲದೆ ಸಂಸ್ಥೆಯ ಪಾಲುದಾರರನ್ನು ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಅಕಾಡೆಮಿ ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಜೈ ಕಿಸಾನ್ ಟ್ರೇಡರ್ಸ್ ಪಾಲುದಾರರಾದ ನವೀನ್ ರೈ ಮೇನಾಲ, ಸುಬೋದ್ ಶೆಟ್ಟಿ ಮೇನಾಲ, ವಿಕ್ರಮ್ ಅಡ್ಪಂಗಾಯ, ತೀರ್ಥಕುಮಾರ್ ಕುಂಚಡ್ಕ ಮತ್ತು ಶಿವರಾಮ ಕಲ್ಪತರು ಮತ್ತು ಮುಕುಂದ ನಾರ್ಕೋಡು ಉಪಸ್ಥಿತರಿದ್ದರು.