ಸುಳ್ಯ:ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ
ನವೆಂಬರ್ 17 ಮತ್ತು 18 ರಂದು ಸುಳ್ಯದಲ್ಲಿ ನಡೆಯುವ ರಾಷ್ಟ್ರೀಯ ಎ ಗ್ರೇಡ್ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ಸಂಘಟನಾ ಕಚೇರಿಗೆ ಮಾಜಿ ಕಬಡ್ಡಿ ಆಟಗಾರ, ತೆಲುಗು ಟೈಟಾನ್ಸ್ ತಂಡದ ಕೋಚ್ ಜಗದೀಶ್ ಕುಂಬ್ಳೆ ಭೇಟಿ ನೀಡಿದರು. ಗ್ರಾಮೀಣ ಭಾಗದಲ್ಲಿ
ಕಬಡ್ಡಿ ಪಂದ್ಯಾಟ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಲಹೆಗಳನ್ನು ನೀಡಿದರು. ಪಂದ್ಯಾಟ ನಡೆಯುವ ಕ್ರೀಡಾಂಗಣವನ್ನು ವೀಕ್ಷಿಸಿದರು. ಪಂದ್ಯಾಟಕ್ಕೆ ತಮ್ಮ ಪೂರ್ತಿ ಸಹಕಾರ ನೀಡುವುದಾಗಿ ತಿಳಿಸಿದರು. ಸಂಘದ ಖಜಾಂಜಿ ಜಿ ಎ ಮೊಹಮ್ಮದ್, ಜಿ ಜಿ ನಾಯಕ್, ಶಾಫಿ ಪ್ರಗತಿ, ಗುರುದತ್ ನಾಯಕ್, ಮಧುಸೂಧನ್ ನಾಯರ್, ರಕ್ಷಿತ್, ಶ್ರೀಧರ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.