ಐವರ್ನಾಡು: ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಡಿ.22 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಮತ ಎಣಿಕೆ ಮುಗಿದ 6 ಸ್ಥಾನಗಳಲ್ಲಿ ಐವರ್ನಾಡು ಸಹಕಾರಿ ಸಂಘದ ಹಾಲಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ ನೇತೃತ್ವದ ತಂಡದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 12 ಸ್ಥಾನಗಳ ಪೈಕಿ
6 ಕ್ಷೇತ್ರಗಳ ಮತ ಎಣಿಕೆ ಮುಗಿದಿದೆ. ಸಾಮಾನ್ಯ ಸ್ಥಾನಗಳ ಮತ ಎಣಿಕೆ ಮುಂದುವರಿದಿದೆ. ಮಹಿಳಾ ಮೀಸಲು ಕ್ಷೇತ್ರದಿಂದ ಮನ್ಮಥ ನೇತೃತ್ವದ ತಂಡದಿಂದ ಸ್ಪರ್ಧಿಸಿದ್ದ ದಿವ್ಯಾ ರಮೇಶ್ ಮಿತ್ತಮೂಲೆ ಹಾಗೂ ಭವಾನಿ ಶೇಖರ ಮಡ್ತಿಲ ಜಯ ಗಳಿಸಿದರು.
ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಮಧುಕರ ನಿಡುಬೆ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ರವಿನಾಥ ಎಂ.ಎಸ್.ಅಯ್ಕೆಯಾದರು.ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ
ಚಂದ್ರಶೇಖರ ಎಸ್. ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ
ಪುರಂದರ ಶಾಂತಿಮೂಲೆ ಜಯ ಗಳಿಸಿದರು.