ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಸುಳ್ಯ ಇದರ ಆಡಳಿತದಡಿಯಲ್ಲಿರುವ ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾಗಿ ತರಬೇತಿ ಅಧಿಕಾರಿ ದಿನೇಶ್ ಮಡ್ತಿಲ ಅವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ ಅವರು ಪದೋನ್ನತಿ ನೀಡಿ ನೇಮಕ
ಮಾಡಿದ್ದಾರೆ.ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದು 1988 ರಲ್ಲಿ ಕೆ.ವಿ.ಜಿ ಐ.ಟಿ.ಐ ಗೆ ಭೋದಕರಾಗಿ ಸೇರ್ಪಡೆಗೊಂಡರು. ೧೯೯೭ರಲ್ಲಿ ಸರಕಾರದ ಅನುದಾನದೊಂದಿಗೆ ತರಬೇತಿ ಅಧಿಕಾರಿಯಾಗಿ ಭಡ್ತಿಗೊಂಡರು. ಕಳೆದ ೩೪ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಐವರ್ನಾಡು ಗ್ರಾಮದ ಮಡ್ತಿಲ ಪುರುಷೊತ್ತಮ ಮತ್ತು ಶಿವಮ್ಮ ದಂಪತಿಗಳ ಪುತ್ರ. ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಚಿದಾನಂದ ಗೌಡ ಬಾಳಿಲ ಮತ್ತು ಅಕಾಡೆಮಿ ಕಛೇರಿಯ ಆಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು