ಜರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ಸಂಘರ್ಷದಲ್ಲಿ ಸತ್ತವರ ಸಂಖ್ಯೆ 1000 ದಾಟಿದೆ. ಇದುವರೆಗೆ 1,100 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶನಿವಾರ, ಹಮಾಸ್ ಇಸ್ರೇಲಿನ ವಿವಿಧ ನಗರಗಳ ಮೇಲೆ 5,000 ಕ್ಕೂ ಹೆಚ್ಚು ರಾಕೆಟ್ಗಳನ್ನು ಹಾರಿಸಿದೆ. ಇದಾದ ಬಳಿಕ ಸಂಘರ್ಷ
ಭುಗಿಲೆದ್ದಿದ್ದು, ಇದರಿಂದ ಹಲವಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.ಇಸ್ರೇಲ್ ಭಾನುವಾರ ಗಾಜಾದಲ್ಲಿರುವ ಹಮಾಸ್ ತಾಣಗಳ ಮೇಲೆ ದಾಳಿ ನಡೆಸಿದೆ. ಪ್ಯಾಲೆಸ್ತೀನ್ನ ಭಯೋತ್ಪಾದಕ ಸಂಘಟನೆ ಹಮಾಸ್ನ ದಾಳಿಯಲ್ಲಿ 700 ಇಸ್ರೇಲಿ ಪ್ರಜೆಗಳು ಕೊಲ್ಲಲ್ಪಟ್ಟರು, ಅನೇಕ ನಾಗರಿಕರನ್ನು ಅಪಹರಿಸಲಾಗಿದೆ. ಹಮಾಸ್ 100 ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿದೆ. 300 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಪ್ರಜೆಗಳು ಕೂಡ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ.
ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ, ಇಸ್ರೇಲ್ನ ಸೇನೆಯು ಗಾಜಾದಲ್ಲಿ ಹಮಾಸ್ ನೆಲೆಗಳನ್ನು ಗುರಿಯಾಗಿರಿಸಿಕೊಂಡಿದೆ. ಇಸ್ರೇಲ್ ಸೇನೆಯು ಹಮಾಸ್ಗೆ ಪ್ರತ್ಯುತ್ತರ ನೀಡಿದ್ದು, ಗಾಜಾ ಪಟ್ಟಿಗೆ ರಾಕೆಟ್ಗಳನ್ನು ಹಾರಿಸುತ್ತಿದೆ. ಇಸ್ರೇಲ್ ಸೇನೆಯ ದಾಳಿಯಲ್ಲಿ ಪ್ಯಾಲೆಸ್ತೀನ್ನಲ್ಲಿ 370 ಜನರು ಸಾವನ್ನಪ್ಪಿದ್ದಾರೆ ಮತ್ತು 2200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಮಾಸ್ ದಾಳಿಯಲ್ಲಿ ಎರಡು ಸಾವಿರ ಮಂದಿ ಇಸ್ರೇಲ್ ನಾಗರಿಕರು ಗಾಯಗೊಂಡಿದ್ದಾರೆ.