ಸುಳ್ಯ:ಸಂಪಾಜೆ ಗ್ರಾಮದ ಗೂನಡ್ಕದ ಪೇರಡ್ಕದಲ್ಲಿ ಮುಹಿಯುದ್ದೀನ್ ರಿಫಾಯಿ ದಫ್ ಅಸೋಸಿಯೇಶನ್ ವತಿಯಿಂದ ಇಸ್ಲಾಮಿಕ್ ಕಥಾಪ್ರಸಂಗ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಇಸ್ಲಾಮಿಕ್ ಕಥಾ ಪ್ರಸಂಗ ಕ್ಷೇತ್ರದಲ್ಲಿ ಖ್ಯಾತರಾದ ಝುಬೈರ್ ಮಾಸ್ಟರ್ ತೋಟಿಕಲ್ ಹಾಗೂ ಸಂಗಡಿಗರು ‘ಮಣಲಾರಣ್ಯತ್ತಿಲೆ ಚೋರ ಪೈದಲ್’ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ
ಕಥಾ ಪ್ರಸಂಗ ಪ್ರಸ್ತುತ ಪಡಿಸಿದರು. ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ರಿಯಾಜ್ ಪೈಝಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮದ್ರಸ ಮೆನೇಜಮೆಂಟ್ ಅಧ್ಯಕ್ಷರಾದ ತಾಜ್ ಮೊಹಮದ್, ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಸಂಟ್ಯಾರ್, ಆರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಅನ್ವರುಲ್ ಹುದಾ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಮಜೀದ್, ಹಸೈನಾರ್ ಮುಸ್ಲಿಯಾರ್, ಪತ್ತಾಹ್ ಕಾಸಿಮಿ,ಕಲ್ಲುಗುಂಡಿ ಮಸೀದಿಯ ಸಾಜೀದ್ ಉಸ್ತಾದ್,ಸುಣ್ಣಮೂಲೆ ಮಸೀದಿ ಕಾರ್ಯದರ್ಶಿ ಇಕ್ಬಾಲ್ ಹಾಜಿ ಇಬ್ರಾಹಿಂ ಕರಾವಳಿ, ಹಮೀದ್ ಹಾಜಿ ಸುಳ್ಯ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ ಅಬ್ದುಲ್ ಖಾದರ್ ಮೊಟ್ಟಂಗಾರ್ ವಂದಿಸಿದರು.














