ಸುಳ್ಯ:ಸಂಪಾಜೆ ಗ್ರಾಮದ ಗೂನಡ್ಕದ ಪೇರಡ್ಕದಲ್ಲಿ ಮುಹಿಯುದ್ದೀನ್ ರಿಫಾಯಿ ದಫ್ ಅಸೋಸಿಯೇಶನ್ ವತಿಯಿಂದ ಇಂದು ಮತ್ತು ನಾಳೆ (ಡಿ.16 ಮತ್ತು 17ರಂದು) ಇಸ್ಲಾಮಿಕ್ ಕಥಾಪ್ರಸಂಗ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ಇಸ್ಲಾಮಿಕ್ ಕಥಾ ಪ್ರಸಂಗ ಕ್ಷೇತ್ರದಲ್ಲಿ ಖ್ಯಾತರಾದ ಝುಬೈರ್ ಮಾಸ್ಟರ್ ತೋಟಿಕಲ್ ಹಾಗೂ ಸಂಗಡಿಗರು ‘ಮಣಲಾರಣ್ಯತ್ತಿಲೆ ಚೋರ ಪೈದಲ್’ ಎಂಬ
ವಿಷಯದಲ್ಲಿ ಎರಡು ದಿನಗಳ ಕಾಲ ಕಥಾ ಪ್ರಸಂಗ ಪ್ರಸ್ತುತ ಪಡಿಸಲಿದ್ದಾರೆ. ಡಿ.16ರಂದು ಸಂಜೆ 7 ಗಂಟೆಗೆ ಪೇರಡ್ಕ ಎಂ.ಜೆ.ಎಂ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಎಂ.ಜೆ.ಎಂ ಪೇರಡ್ಕ ಗೂನಡ್ಕ ಇದರ ಖತೀಬರಾದ ರಿಯಾಝ್ ಫೈಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಡಿ.17ರಂದು ಸಂಜೆ 4ಕ್ಕೆ ವಿವಿಧ ಮದರಸ ಮಕ್ಕಳ ಆಕರ್ಷಕ ದಫ್ ಪ್ರದರ್ಶನ ಮೆರವಣಿಗೆ ನಡೆಯಲಿದೆ. ಕಲ್ಲುಗುಂಡಿ ಫಾತಿಮಾ ಮಹಿಳಾ ಶರೀ ಅತ್ ಕಾಲೇಜಿನ ಅಧ್ಯಕ್ಷ ಎಸ್.ಆಲಿ ಹಾಜಿ ಉದ್ಘಾಟಿಸುವರು.
ಸಂಜೆ 7 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಎಂಆರ್ಡಿಎ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆ ವಹಿಸುವರು. ಸಯ್ಯದ್ ಹಕ್ಕೀಂ ತಂಙಳ್ ಆದೂರು ದಃವಾ ನೆರವೇರಿಸುವರು. ಎಂಜೆಎಂ ಪೇರಡ್ಕ ಖತೀಬರಾದ ರಿಯಾಝ್ ಫೈಝಿ ಉದ್ಘಾಟನೆ ನೆರವೇರಿಸುವರು ಎಂದು ಮುಹಿಯುದ್ದೀನ್ ರಿಫಾಯಿ ದಫ್ ಅಸೋಸಿಯೇಶನ್ನ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ತಿಳಿಸಿದ್ದಾರೆ.












