ಕೊಲೊಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿದೆ.ಈಗ ಪಾಕಿಸ್ತಾನ ಗೆಲ್ಲಲು 120 ಎಸೆತಗಳಲ್ಲಿ 176 ರನ್ ಗಳಿಸಬೇಕಿದೆ.
ಟಾಸ್ ಸೋತು ಮೊದಲು
ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅಭಿಷೇಕ್ ಶರ್ಮಾ (0) ಆರಂಭದಲ್ಲೇ ಆಘಾತ ನೀಡಿದರು.ಆದರೆ, ಮತ್ತೊಬ್ಬ ಆರಂಭಿಕ ಇಶಾನ್ ಕಿಶನ್ ಪಾಕ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಕಿಶನ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಅಬ್ಬರಿಸಿದರು. ಅಂತಿಮವಾಗಿ ಕಿಶನ್ 40 ಎಸೆತಗಳಲ್ಲಿ 77 ರನ್ (10 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ನಲ್ಲಿ ಪವರ್ಪ್ಲೇ ಅವಧಿಯಲ್ಲಿ ಅತಿ ಹೆಚ್ಚು ರನ್ (42) ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಅವರು ತಮ್ಮದಾಗಿಸಿಕೊಂಡರು.
ಕಿಶನ್ ನಿರ್ಗಮನದ ನಂತರ ತಿಲಕ್ ವರ್ಮಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಮುಂದುವರಿಸಿದರು. ನಾಯಕನ ಆಟವಾಡಿದ ಸೂರ್ಯ 32 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತ್ಯದಲ್ಲಿ ಶಿವಂ ದುಬೆ (22) ಒಂದು ಭರ್ಜರಿ ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಲು ನೆರವಾದರು.
ಪಾಕಿಸ್ತಾನದ ಪರ ಸೈಮ್ ಅಯೂಬ್ 3 ಮತ್ತು ಉಸ್ಮಾನ್ ತಾರಿಕ್ ಒಂದು ಪ್ರಮುಖ ವಿಕೆಟ್ ಪಡೆಯುವ ಮೂಲಕ ಭಾರತದ ರನ್ ವೇಗಕ್ಕೆ ಬ್ರೇಕ್ ಹಾಕಿದರು.




