ಸುಳ್ಯ:ಸುಳ್ಯ ಮೊಗರ್ಪಣೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ಅಸ್ಸಖಾಫ್ ಅಲ್ ಖಾದಿರಿ ಮಖಾಂ ಉರೂಸ್ ಕಾರ್ಯಕ್ರಮದ
ಸಮಾರೋಪ ಸಮಾರಂಭದಲ್ಲಿ ಸುಪ್ರಸಿದ್ಧ ಇಸ್ಲಾಮಿಕ್ ಗಾಯಕ ಕೋಯ ಕಾಪಾಡ್ ತಂಡದವರಿಂದ ಕವಾಲಿ ಹಾಗೂ ಇಶಲ್ ನೈಟ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಸ್ಥಳಿಯ ಮಸೀದಿ


ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಿ ಫುಡ್ ವಹಿಸಿದ್ದರು.
ಸನ್ಮಾನ:
ಕೇರಳ ಸರ್ಕಾರದ ಜಾನಪದ ಅಕಾಡೆಮಿಯ ಉಪಾಧ್ಯಕ್ಷರಾದ ಕೋಯಾ ಕಾಪಾಡ್ ಅವರನ್ನು ಸುಳ್ಯ ಭೇಟಿ ಹಿನ್ನಲೆ ಯಲ್ಲಿ ದ. ಕ. ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಮೊಗರ್ಪಣೆ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್,ಮಿಸಬಾಹಿ ಉಸ್ತಾದ್ ಓಟೆಪದವು, ಮೊಗರ್ಪಣೆ ಮುದರ್ರಿಸ್ ಹಾಫಿಲ್ ಶೌಕತ್ ಅಲಿ ಅಮಾನಿ, ಹಿದಾಯತುಲ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ಸಮದ್ ಹಾಜಿ, ಅಬ್ದುಲ್ ರಶೀದ್, ಹೆಚ್.ಐ ಕಮಿಟಿ ಕಾರ್ಯದರ್ಶಿ ಎಸ್.ಯು. ಇಬ್ರಾಹಿಂ, ನಿರ್ದೇಶಕರಾದ ಮಹಮ್ಮದ್ ಜಟ್ಟಿಪ್ಪಳ್ಳ, ಸಿ. ಎಂ. ಉಸ್ಮಾನ್, ಮೊಗರ್ಪಣೆ ಸದರ್ ಮುಲ್ಲಿಂ ಎನ್.ಐ.ಎಂ ಕೆ.ಯು.ಮುಹಮ್ಮದ್ ಸಖಾಫಿ ಅಲ್ ಹಿಕಮಿ ಮೊದಲಾದವರು ಉಪಸ್ಥಿತರಿದ್ದರು