ಪುತ್ತೂರು: ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್ ಕೊಡಲಾಗುವ ಬೆಸ್ಟ್ ಕಾಂಪಿಟೇಟಿವ್ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರಶಸ್ತಿಯನ್ನು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು.2010ರಲ್ಲಿ ಸ್ಥಾಪನೆಗೊಂಡು
ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ನೀಡುತಿದೆ.
ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ಸಲುವಾಗಿ ಕರ್ನಾಟಕದಾದ್ಯಂತ ಸುಮಾರು 75ಕ್ಕೂ ಅಧಿಕ ವಿವಿಧ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ “Maths Shortcut Tricks – For Competitive Exams” ಉಚಿತ ತರಬೇತಿ ಕಾರ್ಯಾಗಾರವನ್ನು ನೀಡಿದೆ. ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023 ಶಿಕ್ಷಣ ಕ್ಷೇತ್ರದಲ್ಲಿ ಸಮರ್ಪಣೀಯ ಕೆಲಸವನ್ನು ಮಾಡಿದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ Best Competitive Coaching Institute ಪ್ರಶಸ್ತಿಯನ್ನು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.