ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ಈ ಕಾರ್ಯಕ್ರಮವನ್ನು ಕುರಿತು ಶಾಲಾ ಸಂಚಾಲಕ ಡಾ.ರೇಣುಕಾಪ್ರಸಾದ್ ಕೆ. ವಿ ‘ ಶಾಲೆಗಳಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ‘ಎಂದು ನುಡಿದರು.ಮತದಾನದ ಆರಂಭದಲ್ಲಿ ಶಾಲಾ
ಪ್ರಾಂಶುಪಾಲ ಅರುಣ್ ಕುಮಾರ್ ‘ ವಿದ್ಯುನ್ಮಾನ ಯಂತ್ರದ ಮೂಲಕ ಮತ ಚಲಾಯಿಸುವುದು ಹೇಗೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು ಬಳಿಕ ಅಣಕು ಮತದಾನವನ್ನು ಮಾಡಲಾಯಿತು.ಆಮೇಲೆ 8,9,10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ
ಮುಖ್ಯ ಚುನಾವಣಾ ಅಧಿಕಾರಿಯಾಗಿ 9ನೇ ತರಗತಿಯ ಅನೀಶ್ , ಮುಖ್ಯ ಅಧೀಕ್ಷಕರಾಗಿ 10ನೇ ತರಗತಿಯ ರಾಮ್ ಕಟ್ಟ, ಮುಖ್ಯ ಉಪ ಅಧೀಕ್ಷಕರಾಗಿ 9ನೇ ತರಗತಿಯ ಶಿಬಾನಿ, ಪೊಲೀಸ್ ಅಧಿಕಾರಿಯಾಗಿ 8ನೇ ತರಗತಿಯ ಭವಿತ್,ಮತಗಟ್ಟೆ ಅಧಿಕಾರಿಗಳಾಗಿ ಹಿಬಾ, ರಿದಾ ಮತ್ತು ಶಿಕ್ಷಕಿಯರಾದ ರೋಹಿಣಿ ಟಿ, ಸುಜಾತಾ ಕಲ್ಲಾಜೆ, ಭವ್ಯ ಅಟ್ಲೂರು, ಜ್ಯೋತ್ಸ್ನಾ , ಪ್ರಜ್ಞ,ಚೈತ್ರ, ಬಬಿತ, ಶೋಭಾ ಜಿ. ವೈ ಕಾರ್ಯನಿರ್ವಹಿಸಿದರು.
ಈ ಶಾಲಾ ಸಂಸತ್ತು ಚುನಾವಣೆಯಿಂದ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆ ಹೇಗಿರುತ್ತದೆ? ಮತಗಟ್ಟೆಯ ಅಧಿಕಾರಿಗಳ ಕರ್ತವ್ಯಗಳೇನು? ನಮೂದಿತ ಉಮೇದುವಾರರ ಹೆಸರಿನ ಮುಂದೆ ತಪ್ಪಾಗದಂತೆ ಮುದ್ರೆ ಒತ್ತುವುದು ಹೇಗೆ? ಮತದಾನ ಮಾಡಿದ ಮತದಾರರ ಕೈಬೆರಳಿಗೆ ಗುರುತು ಹಾಕುವುದು ಏಕೆ? ಇತ್ಯಾದಿ ಹಲವು ಪ್ರಶ್ನೆಗಳಿಗೆ ಇಂದು ಮಕ್ಕಳು ಸ್ವತ: ಮತಚಲಾಯಿಸಿ ಉತ್ತರ ಪಡೆದರು.
ಈ ಕಾರ್ಯಕ್ರಮವನ್ನು ಕುರಿತು ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು. ಜೆ ‘ ದೇಶದಾದ್ಯಂತ ನಡೆಯುವ ಚುನಾವಣಾ ಸಂದರ್ಭದಲ್ಲಿ ಮತದಾನ ಜಾಗೃತಿ ತಂಡ ಇರುವಂತೆಯೇ ಶಾಲಾ ಮಟ್ಟದಲ್ಲಿಯೂ ಮಕ್ಕಳಿಗೆ ಮತದಾನದ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವ ಶಿಕ್ಷಕರ ಕಾರ್ಯವೈಖರಿ ಮೆಚ್ಚುವಂತದ್ದು ‘ ಎಂದು ನುಡಿದರು.