ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆ. 26ರಂದು ಸಂಭ್ರಮದಿಂದ ಆಚರಿಸಲಾಯಿತು . ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು.ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ಕೆ ವಿ ಜಿ ಐ ಟಿ ಐ ನ
ಪ್ರಾಂಶುಪಾಲ ಚಿದಾನಂದ ಬಾಳಿಲ, ಸುಳ್ಯ ನಗರ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಕೆವಿಜಿ ಡೆಂಟಲ್ ಕಾಲೇಜಿನ ವೈದ್ಯ ಡಾ. ರೇವಂತ್,ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಮತ್ತು ಕೃಷ್ಣವೇಷ ಧರಿಸಿದ ಪುಟಾಣಿ ಮಕ್ಕಳು ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಉಜ್ವಲ್ ಯು ಜೆ ‘ ಕೃಷ್ಣನ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಾವು, ಅವನಂತೆ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಕೆಲಸವನ್ನು ಮಾಡೋಣ. ಕೃಷ್ಣನ ಅನುಗ್ರಹ ಸದಾ ನಮ್ಮ ಮೇಲೆ ಇರಲಿ ‘ ಎಂದು ಹೇಳಿದರು. ಚಿದಾನಂದ ಬಾಳಿಲ ಮಾತನಾಡಿ’ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ‘ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ಮಾನವ ಜೀವನದಲ್ಲಿ ಶಾಂತಿ ಮತ್ತು ಮೌಲ್ಯಯುತವಾದ ಜೀವನವನ್ನು ನಡೆಸಿ ನಾವು ಇನ್ನೊಬ್ಬರಿಗೆ ಆದರ್ಶವಾಗಬೃಕು ಎಂದು ತಿಳಿಸಿದರು.ಬಳಿಕ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಕೃಷ್ಣನ ಪೌರಾಣಿಕ ಕಥೆಯ ನಾಟಕ ಮತ್ತು ನೃತ್ಯವನ್ನು ಮಾಡಿದರು.
10ನೇ ತರಗತಿಯ ಅಶ್ವಿತ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಮಹತ್ವದ ಕುರಿತು ತಿಳಿಸಿದಳು.ಈ ಸಂದರ್ಭದಲ್ಲಿ ಕೆವಿಜಿ ಕಿಂಡರ್ ಗಾರ್ಡನ್ ನ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ಕೆವಿಜಿ ಡೆಂಟಲ್ ಕಾಲೇಜಿನ ಡಾ. ಅನುಪಮಾ ಆರ್.ಪಿ , ಡಾ.ಭೂಮಿಕಾ ಮತ್ತು ಡಾ . ಪ್ರಕೃತಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು. ಬಳಿಕ ಮನೋರಂಜನೆಗಾಗಿ ವಿದ್ಯಾರ್ಥಿಗಳಿಗೆ, ಹಾಗೂ ಶಿಕ್ಷಕ ಶಿಕ್ಷಕೇತರ ವರ್ಗದವರಿಗೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಮುಂದಾಳತ್ವವನ್ನು ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞ ಡಿ ಆರ್ ವಹಿಸಿ ಕೊಂಡರು . ಕಾರ್ಯಕ್ರಮವನ್ನು ರಿಮಾ ಫಾತಿಮಾ ನಿರೂಪಿಸಿ, ಅನೀಶ್ ಸ್ವಾಗತಿಸಿ ಗಾಯಕ್ ವಂದಿಸಿದನು.