ಮುಂಬೈ:ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 240 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು.ಗುರಿ ಬೆನ್ನಟ್ಟಿದ ಮುಂಬೈ 20 ಓವರ್ಗಳಲ್ಲಿ
5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿ ಹೋರಾಟ ನಡೆಸಿದರೂ 18 ರನ್ಗಳ ಸೋಲಾಯಿತು.ಮುಂಬೈ ಪರ ಕೊನೆಯಲ್ಲಿ ಅಬ್ಬರಿಸಿದ ಶೆರ್ಫೈನ್ ರುದರ್ಫೋರ್ಡ್ 31 ಎಸೆತಗಳಲ್ಲಿ 9 ಸಿಕ್ಸರ್, 1 ಬೌಂಡರಿ ನೆರವಿನಿಂದ ಅಜೇಯ 71 ರನ್ ಗಳಿಸಿ ಬಿರುಸಿನ ಹೋರಾಟ ನಡೆಸಿದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ 40, ಸೂರ್ಯಕುಮಾರ್ ಯಾದವ್ 33, ರಯಾನ್ ರಿಕೆಲ್ಟನ್ 37 ರನ್ ಗಳಿಸಿದರು.ಆರ್ಸಿಬಿ ಪರ ಸುಯೇಶ್ ಶರ್ಮ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಅಬ್ಬರಿಸಿದ ಫಿಲ್ ಸಾಲ್ಟ್ 36 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿ ಸಹೀತ 78 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕಿಂಗ್ ಕೊಹ್ಲಿ 38 ಎಸೆತಗಳ್ಲಲಿ 50 ರನ್ ಗಳಿಸಿದರು. ಬಳಿಕ, ಶುರುವಾಗಿದ್ದೇ ನಾಯಕ ರಜತ್ ಪಾಟೀದಾರ್ ಅಬ್ಬರ. 20 ಎಸೆತಗಳಲ್ಲಿ 5 ಸಿಕ್ಸರ್, 4 ಬೌಂಡರಿ ಸಹಿತ 53 ರನ್ ಪೇರಿಸಿದ ಪಾಟೀದಾರ್, ಮುಂಬೈ ಬೌಲರ್ಗಳನ್ನು ಅಕ್ಷರಶಃ ಕಾಡಿದರು. ಅಂತ್ಯದಲ್ಲಿ ಟಿಮ್ ಡೇವಿಡ್ 16 ಎಸೆತಗಳಲ್ಲಿ 32 ರನ್ ಗಳಿಸುವಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು.ಮುಂಬೈ ಪರ ಬೂಮ್ರಾ ಸಾಂಟನರ್ ಸೇರಿದಂತೆ ಎಲ್ಲ ಬೌಲರ್ಗಳು ದುಬಾರಿಯಾದರು. ಯಾರೊಬ್ಬರಿಂದಲೂ ಆರ್ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.















