ಮೊಹಾಲಿ:ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಪಂಜಾಬ್ ಕಿಂಗ್ಸ್ ತಂಡದ ನಡುವೆ ನಡೆದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಮಳೆಯಿಂದ ಎರಡನೇ ಇನ್ನಿಂಗ್ಸ್ನ 16ನೇ ಓವರ್ನಲ್ಲಿ ನಿಂತು ಹೋದ ಪಂದ್ಯದ ಫಲಿತಾಂಶವನ್ನು ಡಕ್ವರ್ತ್ ಲೂಯಿಸ್ ನಿಯಮದ ಅನುಸಾರ ಪ್ರಕಟಿಸಲಾಗಿದ್ದು, ಪಂಜಾಬ್ ಏಳು ರನ್ಗಳಿಂದ ಗೆದ್ದಿದೆ. ಟಾಸ್ ಸೋತು
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಶ್ರೀಲಂಕಾದ ಭಾನುಕಾ ರಾಜಪಕ್ಸೆ ಅವರ ಅರ್ಧಶತಕದ ನೆರವಿನಿಂದ, 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 191ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕೆಕೆಆರ್ 16 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು.
ತೀವ್ರ ಮಳೆಯಿಂದಾಗಿ ಪಂದ್ಯದ ಫಲಿತಾಂಶವನ್ನು ಡಕ್ವರ್ತ್ ಲೂಯಿಸ್ ನಿಯಮದ ಅಡಿ ಪ್ರಕಟಿಸಲಾಯಿತು. ಅದರಂತೆ ಕೆಕೆಆರ್ಗೆ 7ರನ್ಗಳ ಸೋಲು ಕಂಡಿದೆ. ಕೆಕೆಆರ್ ಪರ ಆ್ಯಂಡ್ರೆ ರಸೆಲ್(35 ರನ್, 19 ಎಸೆತ), ವೆಂಕಟೇಶ್ ಅಯ್ಯರ್(34 ರನ್, 28 ಎಸೆತ), ನಾಯಕ ನಿತಿಶ್ ರಾಣಾ(24 ರನ್, 17 ಎಸೆತ), ಗುರ್ಬಾಝ್(22 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಪಂಜಾಬ್ ಪರ ವೇಗದ ಬೌಲರ್ ಅರ್ಷದೀಪ್ ಸಿಂಗ್(3-19) ಮೂರು ವಿಕೆಟ್ಗಳನ್ನು ಪಡೆದು ಯಶಸ್ವಿ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ತಂಡದ ಪರ ಭಾನುಕ ರಾಜಪಕ್ಸ 32 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹೀತ ಬಾರಿಸಿದ 50 ರನ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 191 ರನ್ ಗಳಿಸಿತು.