ಲಖನೌ: ಪ್ರಸಿದ್ಧ ಕೃಷ್ಣ ಮಾರಕ ಬೌಲಿಂಗ್, ಜೋಸ್ ಬಟ್ಲರ್ ಮತ್ತು ನಾಯಕ ಶುಭಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಜಯ ದಾಖಲಿಸಿತು.ಮೊದಲು ಬ್ಯಾಟ್ ಮಾಡಿದ
ಲಖನೌ 20 ಓವರ್ಗಳಲ್ಲಿ
7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 16.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಶುಭಮನ್ ಗಿಲ್(56) ಮತ್ತು ಜೋಸ್ ಬಟ್ಲರ್(60) ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತೆವಾಟಿಯಾ ತಂಡವನ್ನು ಗೆಲುವಿನ ದಡ ದಾಟಿಸಿದರು. ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದ ಗುಜರಾತ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.
ಇದಕ್ಕೂ ಮುನ್ನ ಗುಜರಾತ್ನ ಕರಾರುವಾಕ್ ಬೌಲಿಂಗ್ ಎದುರು ಆರಂಭದಿಂದಲೂ ರನ್ ಗಳಿಸಲು ಲಖನೌ ಬ್ಯಾಟರ್ಗಳು ಪರದಾಡಿದರು.
ಆರಂಭಿಕ ಆಟಗಾರ ಏಡೆನ್ ಮರ್ಕರಂ 30 ನಿಕೊಲಸ್ ಪೂರನ್ 19, ಅಬ್ದುಲ್ ಸಮದ್ 18 ಮತ್ತು ಮುಕುಲ್ ಚೌಧರಿ 18, ಜಾರ್ಜ್ ಲಿಂಡೆ 16 ರನ್ ಗಳಿಸಿದರು.ಗುಜರಾತ್ ಪರ ಪ್ರಸಿದ್ಧ ಕೃಷ್ಣ 28 ರನ್ ನೀಡಿ 4 ವಿಕೆಟ್ ಉರುಳಿಸಿದರು. ಅಶೋಕ್ ಶರ್ಮಾ ಸಹ 2 ವಿಕೆಟ್ ಪಡೆದರು.















