ಅಹಮದಾಬಾದ್:ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.
ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಆಕರ್ಷಕ ಅರ್ಧಶತಕ (63 ರನ್, 36 ಎಸೆತ, 6 ಬೌಂಡರಿ, 3 ಸಿಕ್ಸರ್) ಸಿಡಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ
178 ರನ್ ಗಳಿಸಿತು.ಗೆಲ್ಲಲು 179 ರನ್ ಗುರಿ ಪಡೆದ ಗುಜರಾತ್ 19.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.
ವಿಜಯ ಶಂಕರ್(27 ರನ್), ವೃದ್ದಿಮಾನ್ ಸಹಾ(25 ರನ್), ಸಾಯಿ ಸುದರ್ಶನ್(22 ರನ್), ರಾಹುಲ್ ಟೆವಾಟಿಯ(ಔಟಾಗದೆ 15 ರನ್) ಉತ್ತಮ ಸ್ಕೋರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಚೆನ್ನೈ ಪರ ರಾಜ್ಯವರ್ಧನ್(3-36)ಯಶಸ್ವಿ ಬೌಲರ್ ಎನಿಸಿಕೊಂಡರು. ಚೆನ್ನೈ ಪರ ಆಕರ್ಷಕ ಬ್ಯಾಟಿಂಗ್ ನಡೆಸಿದ ಋತುರಾಜ್ ಗಾಯಕ್ವಾಡ್
92 ರನ್(50 ಎಸೆತ, 4 ಬೌಂಡರಿ, 9 ಸಿಕ್ಸರ್) ಗಳಿಸಿ ತಂಡಕ್ಕೆ ಆಸರೆಯಾದರು. ಅಂಬಟಿ ರಾಯುಡು ಜೊತೆಗೆ 4ನೇ ವಿಕೆಟಿಗೆ 51 ರನ್ ಸೇರಿಸಿ ಚೆನ್ನೈ ಸ್ಕೋರನ್ನು ಹೆಚ್ಚಿಸಿದರು. ಗಾಯಕ್ವಾಡ್ ಹೊರತುಪಡಿಸಿ ಮೊಯಿನ್ ಅಲಿ(23 ರನ್), ಶಿವಂ ದುಬೆ(19 ರನ್),ಎಂ.ಎಸ್. ಧೋನಿ (ಔಟಾಗದೆ 14 ರನ್)ಹಾಗೂ ಅಂಬಟಿ ರಾಯುಡು(12 ರನ್) ಎರಡಂಕೆಯ ಸ್ಕೋರ್ ಗಳಿಸಿದರು.ಗುಜರಾತ್ ಪರ ಸ್ಪಿನ್ನರ್ ರಶೀದ್ ಖಾನ್(2-26), ವೇಗಿಗಳಾದ ಮುಹಮ್ಮದ್ ಶಮಿ(2-29) ಹಾಗೂ ಅಲ್ಜಾರಿ ಜೋಸೆಫ್(2-33)ತಲಾ ಎರಡು ವಿಕೆಟ್ಗಳನ್ನು ಪಡೆದರು.