ಕಲ್ಲಪಳ್ಳಿ: ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಕಲ್ಲಪಳ್ಳಿ ಸಮೀಪ ರಸ್ತೆ ಮಧ್ಯೆ ಮಗುಚಿ ಬಿದ್ದ ಲಾರಿಯನ್ನು ತೆರವು ಮಾಡಲಾಗಿದ್ದು ಅಂರಾಜ್ಯ ರಸ್ತೆಯಲ್ಲಿ ವಾಹನ ಸಂಚಾರ ಮರು ಸ್ಥಾಪಿಸಲಾಗಿದೆ. ಮರದ ದಿಮ್ಮಿಗಳನ್ನು
ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಕಲ್ಲಪಳ್ಳಿ ಸಮೀಪ ಗಡಿಗುಡ್ಡೆ ಎಂಬಲ್ಲಿ ಲಾರಿ ಮಗುಚಿ ಬಿದ್ದಿತ್ತು. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಪೊಲೀಸರು ಮತ್ತಿತರು ಕಾರ್ಯಾಚರಣೆ ನಡೆಸಿ ಕ್ರೇನ್ ಬಳಸಿ ಲಾರಿಯನ್ನು ತೆರವು ಮಾಡಲಾಗಿದೆ. ಬಳಿಕ ವಾಹನ ಸಂಚಾರ ಆರಂಭಗೊಂಡಿತು.