ಸುಳ್ಯ:ಸುಳ್ಯ-ಕಲ್ಲಪ್ಪಳ್ಳಿ- ಪಾಣತ್ತೂರು ಅಂತಾರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ಗುಡ್ಡ ಕುಸಿದು ರಸ್ತೆಗೆ ಬಿದ್ದ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆ. ಭಾರಿ ಪ್ರಮಾಣದಲ್ಲಿ ಮಣ್ಣು, ಮರ ಸಮೇತ ಗುಡ್ಡಜರಿದು ರಸ್ತೆ ಪೂರ್ತಿ ಬಂದ್ ಆಗಿತ್ತು. ಇದರಿಂದ ವಾಹನ ಸಂಚಾರಕ್ಕೆ

ತಡೆ ಉಂಟಾಗಿತ್ತು ಮತ್ತು ನಡೆದು ಹೋಗಲು ಸಾಧ್ಯವಿಲ್ಲದ ರೀತಿಯಲ್ಲಿ ರಸ್ತೆ ಮುಚ್ಚಿ ಹೋಗಿತ್ತು. ನಿನ್ನೆ ಸಂಜೆ ಸ್ವಲ್ಪ ಪ್ರಮಾಣದಲ್ಲಿ ಮಣ್ಣು ತೆರವು ಮಾಡಿ ಲಘು ವಾಹನಗಳನ್ನು ಬಿಡಲಾಗಿತ್ತು. ಇದೀಗ ಜೆಸಿಬಿ ಟಿಪ್ಪರ್ ಬಳಸಿ ಮಣ್ಣು, ಕಲ್ಲು, ಮರ ತೆರವು ಕಾರ್ಯ ನಡೆಸಲಾಗುತಿದೆ.
ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ ಹಾಗೂ ಪನತ್ತಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಮಣ್ಣು ತೆರವು ಕಾರ್ಯ ಮುಂದುವರಿದಿದ್ದು ಸಂಜೆಯ ವೇಳೆಗೆ ರಸ್ತೆ ಪೂರ್ತಿಯಾಗಿ ರಸ್ತೆ ತೆರವಾಗಲಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ ತಿಳಿಸಿದ್ದಾರೆ.
