ಸುಳ್ಯ:ಸುಳ್ಯದ ಜ್ಯೋತಿ ವೃತ್ತದ ಬಳಿಯ ಬಂಗ್ಲೆಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣ ಗೊಳ್ಳಲಿರುವ ನಿರೀಕ್ಷಣಾ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು . 2022-23ನೇ ಸಾಲಿನ 5054ಯಡಿಯಲ್ಲಿ 2 ಕೋಟಿ ರೂ ಅನುದಾನದಲ್ಲಿ ಸುಳ್ಯದಲ್ಲಿ ನೂತನ ನಿರೀಕ್ಷಣಾ ಮಂದಿರ ನಿರ್ಮಾಣವಾಗಲಿದೆ. ಈಗ ಇರುವ ಐಬಿ ಸಮೀಪದಲ್ಲಿ

ನಿರ್ಮಾಣಗೊಳ್ಳುವ ನೂತನ ಕಟ್ಟಡಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ.ತೀರ್ಥರಾಮ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಶೀಲಾ ಅರುಣ್ ಕುರುಂಜಿ, ಕಿಶೋರಿ ಶೇಟ್, ಬುದ್ಧ ನಾಯ್ಕ, ಪ್ರಮುಖರಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ರಾಧಾಕೃಷ್ಣ ಬೊಳ್ಳೂರು, ಸುನಿಲ್ ಕೇರ್ಒಳ,ಚಂದ್ರ ಕೋಲ್ಚಾರು, ವಿನಯಕುಮಾರ್ ಮುಳುಗಾಡು, ಹರೀಶ್ ಬೂಡುಪನ್ನೆ, ಶೀನಪ್ಪ ಬಯಂಬು, ಸುಪ್ರೀತ್ ಮೋಂಟಡ್ಕ ಇನ್ನಿತರರು ಉಪಸ್ಥಿತರಿದ್ದರು.