ಸುಬ್ರಹ್ಮಣ್ಯ: ಕಾಡಾನೆಯೊಂದು ರಸ್ತೆ ದಾಟಿ ಆತಂಕ ಸೃಷ್ಟಿಸಿದ ಘಟನೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಎಂಬಲ್ಲಿ ನಡೆದಿದೆ.
ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಸಮೀಪ ಕಡಬ ತಾಲೂಕಿನ ಐನೆಕಿದು ಶಾಲಾ ಬಳಿ ಕಾಡಾನೆಯೊಂದು (ಒಂಟಿ ಸಲಗ) ಸಂಜೆ ರಸ್ತೆ

ದಾಟಿದೆ. ಐನೆಕಿದು ಕಡೆಯಿಂದ ಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ದಾಟಿದೆ. ಕಾಡಾನೆ ರಸ್ತೆ ದಾಟುತ್ತಿರುವುದನ್ನು ಸ್ಥಳೀಯರು ವಿಡಿಯೋ ಚಿತ್ರಿಸಿದ್ದಾರೆ. ಘಟನೆಯಿಂದ
ಆ ಭಾಗದ ಜನತೆ ಆತಂಕಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗಿದೆ.














