ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ 108 ನೇ ಜನ್ಮ ದಿನವನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ
ನಂದರಾಜ್ ಸಂಕೇಶ್,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್ ಸ್ವಾಗತಿಸಿ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ವಂದಿಸಿದರು. ಮುಖಂಡರುಗಳಾದ ದಿನೇಶ್ ಅಂಬೆಕಲ್ಲು, ಮಹಮ್ಮದ್ ಪವಾಜ್, ಭವಾನಿಶಂಕರ ಕಲ್ಮಡ್ಕ, ಜತ್ತಪ್ಪ ಗೌಡ, ಸಿದ್ದೀಕ್ ಕೋಕೋ, ಶಹೀದ್ ಪಾರೆ, ಡೇವಿಡ್ ಧೀರ ಕ್ರಾಸ್ತಾ, ರಿಯಾಜ್ ಕಟ್ಟೆಕಾರ್, ಕೇಶವ ಮೊರಂಗಲ್ಲು ಮತ್ತು ಇಬ್ರಾಹಿಂ ಉಪಸ್ಥಿತರಿದ್ದರು.





