ಕೊಲಂಬೊ:ಪಾಕಿಸ್ತಾನದ ವಿರುದ್ಧ ಫೆ.15ರಂದು ಕೊಲೊಂಬೋದಲ್ಲಿ ನಡೆಯುವ ವಿಶ್ವಕಪ್ ಟಿ20 ಪಂದ್ಯವನ್ನು ಗೆಲ್ಲುವತ್ತ ಭಾರತ ಗಮನ ಹರಿಸಿದೆ ಎಂದು ಟೀಂ ಇಂಡಿಯಾದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.ಟಿ20 ವಿಶ್ವಕಪ್ನ ಎ ಗುಂಪಿನ ಲೀಗ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ತಂಡವನ್ನು
ಭಾನುವಾರ(ಫೆ.15) ಎದುರಿಸಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ವಿಶ್ವಕಪ್ನ ಕಳೆದೆರೆಡು ಪಂದ್ಯಗಳಲ್ಲಿ ನಾವು ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆದರೆ, ಪಾಕ್ ವಿರುದ್ಧದ ಪಂದ್ಯಕ್ಕೆ ನಾವು ಸಿದ್ಧರಾಗಿದ್ದೇವೆ. ಪಾಕ್ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಕ್ ಕುರಿತ ಪ್ರಶ್ನೆಗೆ ಅದು ‘ಔಟ್ ಆಫ್ ಸಿಲಬಸ್ ಕೊಶ್ಚನ್, ಆದರೆ, ನಾವು ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಯನ್ನು ಕೂಡ ಬಿಟ್ಟುಬರಬಾರದು. ಅದಕ್ಕೆ ನಮ್ಮದೇ ಶೈಲಿಯ ಉತ್ತರ ಬರಿಯುತ್ತೇವೆ ಎಂದು ಸೂರ್ಯ ಹೇಳಿದ್ದಾರೆ.
ನಮ್ಮ ಬ್ಯಾಟರ್ಗಳು ಎಲ್ಲಾ ರೀತಿಯ ಬೌಲರ್ಗಳು ಹಾಗೂ ಬೌಲಿಂಗ್ ಶೈಲಿಗೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಒಬ್ಬ ಅಥವಾ ಇಬ್ಬರು ಬ್ಯಾಟರ್ಗಳು ಪಂದ್ಯವನ್ನು ಗೆಲ್ಲಿಸಬಲ್ಲರು ಎಂದು ಹೇಳಿದ್ದಾರೆ.




