ಕೊಲಂಬೊ:ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.ಬಾಂಗ್ಲಾ ತಂಡವನ್ನು ಅನರ್ಹಗೊಳಿಸಿದ್ದಕ್ಕಾಗಿ ಭಾರತದ ಎದುರು ಆಡಬಾರದು’ ಎಂದು ಪಾಕಿಸ್ತಾನ ಸರ್ಕಾರ ತಮ್ಮ ತಂಡಕ್ಕೆ ಸೂಚಿಸಿತ್ತು. ಆದರೆ ಹಲವು ನಾಟಕೀಯ ಬೆಳವಣಿಗೆಗಳ ನಂತರ ಪಾಕಿಸ್ತಾನವು ಆಡಲು ಸಿದ್ಧವಾಗಿದೆ. ಇಲ್ಲಿಯವರೆಗಿನ ಒಟ್ಟು
16 ಟಿ20 ಪಂದ್ಯಗಳಲ್ಲಿ 13ರಲ್ಲಿ ಭಾರತ ಮೇಲುಗೈ ಸಾಧಿಸಿದೆ. ಸ್ಪಿನ್
ಬೌಲಿಂಗ್ಗೆ ನೆರವಾಗುವ ಪಿಚ್ನಲ್ಲಿ ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಅರ್ಷದೀಪ್ ಸಿಂಗ್ ಹಾಗೂ ಬ್ಯಾಟರ್ ರಿಂಕು ಸಿಂಗ್ ವಿಶ್ರಾಂತಿ ಪಡೆಯಬಹುದು. ಜಸ್ಪ್ರೀತ್ ಬೂಮ್ರಾ ಅವರಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎರಡನೇ ಮಧ್ಯಮವೇಗಿಯಾಗಿ ಜೊತೆ ನೀಡಬಹುದು. ಹೊಟ್ಟೆನೋವಿನ ಸಮಸ್ಯೆಯಿಂದ ಬಳಲಿರುವ ಅಭಿಷೇಕ್ ಶರ್ಮಾ ಇಂದು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ನಿನ್ನೆ ಅವರು ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದಾರೆ. ಇಶಾನ್ ಕಿಶನ್ ಜೊತೆ ಅಭಿಷೇಕ್ ಇನ್ನೀಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ತಿಲಕ್ ವರ್ಮಾ, ಸೂರ್ಯಕುಮಾರ್ ಮತ್ತು ಶಿವಂ ದುಬೆ ಅವರು ಸ್ಥಿರ ಪ್ರದರ್ಶನ ನೀಡಿದರೆ ದೊಡ್ಡ ಮೊತ್ತ ಗಳಿಸುವುದು ಸಾಧ್ಯವಾಗಲಿದೆ.
ಭಾರತದ ಪಾರಮ್ಯವನ್ನು ಮೀರಿನಿಲ್ಲುವ ಛಲದಲ್ಲಿರುವ ಪಾಕ್ ತಂಡವು ತನ್ನ ಸ್ಪಿನ್ ಬೌಲರ್ಗಳಾದ ಅಬ್ರಾರ್ ಅಹಮದ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್ ಮತ್ತು ಉಸ್ಮಾನ್ ತಾರೀಕ್ ಅವರ ಮೇಲೆ ವಿಶ್ವಾಸವಿಟ್ಟಿದೆ. ಸ್ಪಿನ್ನರ್ ಉಸ್ಮಾನ್ ತಾರೀಕ್ ಅವರತ್ತ ಗಮನ ಹೆಚ್ಚಿದೆ.
ಒಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲ್ಲುವ ತಂಡವು ಸೂಪರ್ 8ರ ಹಂತಕ್ಕೆ ಪ್ರವೇಶಿಸಲಿದೆ.




