ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪದಕದ ಖಾತೆ ತೆರೆದ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್ನಲ್ಲೂ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
ಸರಬ್ಜೋತ್ ಸಿಂಗ್ ಜೊತೆಯಲ್ಲಿ ಮಿಶ್ರ ತಂಡದ ವಿಭಾಗದಲ್ಲಿ ಕಣಕ್ಕಿಳಿದಿದ್ದ
ಅವರು ಸೌತ್ ಕೊರಿಯಾದ ಲೀ ವಾನ್ ಹೊ ಮತ್ತು ಯೆ-ಜಿನ್ ವಿರುದ್ಧ ಕಂಚಿಗೆ ಗುರಿಯಿಟ್ಟಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸ ಬರೆದಿದ್ದಾರೆ.ಆರಂಭದಲ್ಲೇ ಲೀಡ್ ಕಾಯ್ದುಕೊಂಡಿದ್ದ ಮನು- ಸರಬ್ಜೋತ್ 16-10 ರಿಂದ ಕೊರಿಯಾವನ್ನು ಸೋಲಿಸಿ ಕಂಚು ಮುಡಿಗೇರಿಸಿಕೊಂಡಿದೆ. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡನೇ ಪದಕವನ್ನು ಭಾರತ ಗೆದ್ದಿದೆ.