ನವದೆಹಲಿ:ಲೋಕಸಭಾ ಚುನಾವಣೆ ಜೊತೆಗೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳಲ್ಲಿ 26 ಕ್ಷೇತ್ರಗಳ ಉಪ ಚುನಾವಣೆ ಘೋಷಣೆ ಮಾಡಲಾಗಿದೆ. ಯಾವೆಲ್ಲಾ ಹಂತಗಳಲ್ಲಿ ಎಲ್ಲೆಲ್ಲಿ ಯಾವಾಗ ಚುನಾವಣೆ ನಡೆಯಲಿದೆ ಎಂಬ
ಮಾಹಿತಿ ಇಲ್ಲಿದೆ
ಲೋಕಸಭೆ ಚುನಾವಣೆ 1ನೇ ಹಂತ ಏಪ್ರಿಲ್ 19:
(ಒಟ್ಟು ಕ್ಷೇತ್ರಗಳು 102)
ಅರುಚಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿ.
ಲೋಕಸಭೆ ಚುನಾವಣೆ 2ನೇ ಹಂತ ಏಪ್ರಿಲ್ 26:(ಒಟ್ಟು ಕ್ಷೇತ್ರಗಳು 89):ಅಸ್ಸಾಂ, ಬಿಹಾರ, ಛತ್ತೀಸಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ
ಲೋಕಸಭೆ ಚುನಾವಣೆ 3ನೇ ಹಂತ ಮೇ 07: (ಒಟ್ಟು ಕ್ಷೇತ್ರಗಳು 94) ಅಸ್ಸಾಂ, ಬಿಹಾರ, ಛತ್ತೀಸಗಢ, ಗೋವಾ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದಾದ್ರಾ-ನಗರ ಹವೇಲಿ ಮತ್ತು ದಾಮನ್-ದಿಯು, ಜಮ್ಮು ಮತ್ತು ಕಾಶ್ಮೀರ.
ಲೋಕಸಭೆ ಚುನಾವಣೆ 4ನೇ ಹಂತ ಮೇ 13: (ಒಟ್ಟು ಕ್ಷೇತ್ರಗಳು 96) ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ
ಲೋಕಸಭೆ ಚುನಾವಣೆ 5ನೇ ಹಂತ ಮೇ 20:(ಒಟ್ಟು ಕ್ಷೇತ್ರಗಳು 49)
ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್
ಲೋಕಸಭೆ ಚುನಾವಣೆ 6ನೇ ಹಂತ ಮೇ 25:(ಒಟ್ಟು ಕ್ಷೇತ್ರಗಳು 57)
ಬಿಹಾರ, ಹರಿಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ
ಲೋಕಸಭೆ ಚುನಾವಣೆ 7ನೇ ಹಂತ ಜೂನ್ 1: (ಒಟ್ಟು ಕ್ಷೇತ್ರಗಳು 57)
ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ
ವಿಧಾನಸಭಾ ಚುನಾವಣೆ:
ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯು ನಾಲ್ಕು ಹಂತಗಳಲ್ಲಿ ನಡೆಯಲಿದೆ.ಮೇ 13ರಂದು ಮೊದಲ ಹಂತ, ಮೇ 20ರಂದು ಎರಡನೇ ಹಂತ, ಮೇ 25ರಂದು ಮೂರನೇ ಹಂತ ಹಾಗೂ ಜೂನ್ 1ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ
ಅರುಣಾಚಲ ಪ್ರದೇಶದ 60, ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಚುನಾವಣೆ ನಡೆಯಲಿದೆ.
ಆಂಧ್ರಪ್ರದೇಶ ಸೇರಿದಂತೆ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಆಂಧ್ರಪ್ರದೇಶ ವಿಧಾನಸಭೆಯ 175 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮೇ 13 ರಂದು ಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆ ಜೊತೆಯಲ್ಲಿಯೇ 13 ರಾಜ್ಯಗಳ 26 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರ: ಮೇ 7ರಂದು ಉಪಚುನಾವಣೆ
ಎಲ್ಲಾ ಚುನಾವಣೆಗಳ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ ಎಂದು ಚುನಾವಣಾ ಅಯೋಗ ತಿಳಿಸಿದೆ.









