ಬೆಂಗಳೂರು :ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ, ರೋಹಿತ್ ಶರ್ಮ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಸಿಡಿಸಿದ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ನೆದರ್ಲ್ಯಾಂಡ್ಸ್ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿ ನೆದರ್ಲ್ಯಾಂಡ್ಸ್ ಗೆಲುವಿಗೆ 411 ರನ್ ಗಳ ಕಠಿಣ ಗುರಿ ನೀಡಿದೆ. ಕ್ರೀಸಿಗೆ ಬಂದ ಬ್ಯಾಟರ್ಗಳೆಲ್ಲ ಭರ್ಜರಿ ಬ್ಯಾಟಿಂಗ್ ನಡೆಸಿದ
ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಹಾಗೂ ಕೆ ಎಲ್ ರಾಹುಲ್ ಸ್ಟೋಟಕ ಶತಕ ಹಾಗೂ ಬ್ಯಾಟ್ ಬೀಸಿದ ಭಾರತೀಯ ಎಲ್ಲಾ ಬ್ಯಾಟರ್ಗಳ ಅರ್ಧಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ದಾಖಲಿಸಿತು. ವಿಢ್ವಕಪ್ನ ಚೊಚ್ಚಲ ಶತಕ ದಾಖಲಿಸಿದ
ಶ್ರೇಯಸ್ ಐಯ್ಯರ್ 94 ಎಸೆತಗಳಲ್ಲಿ 10 ಬೌಂಡರಿ 5 ಸಿಕ್ಸರ್ ಸಹಿತ ಅಜೇಯ 128 ರನ್ ಬಾರಿಸಿದರು. ಕೆ ಎಲ್ ರಾಹುಲ್ ಕೇವಲ 64 ಎಸೆತಗಳಲ್ಲಿ 11 ಬೌಂಡರಿ 4 ಸಿಕ್ಸರ್ ಸಹಿತ 102 ರನ್ ಗಳಿಸಿದರು. ಅರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 100 ರನ್ ಜೊತೆಯಾಟ ಆಡಿದರು. ರೋಹಿತ್ 54 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 61 ರನ್ ಪೇರಿಸಿದರೆ, ಶುಭ್ಮನ್ ಗಿಲ್ 32 ಎಸೆತಗಳಲ್ಲಿ 3 ಬೌಂಡರಿ 4 ಭರ್ಜರಿ ಸಿಕ್ಸರ್ ನೆರವಿನಿಂದ 51 ರನ್ ಪೇರಿಸಿದರು. ವಿರಾಟ್ ಕೊಹ್ಲಿ 56 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ 51 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ 4ನೇ ವಿಕೆಟ್ಗೆ 127 ಎಸೆತಗಳಲ್ಲಿ 208 ರನ್ ಬಾರಿಸಿ ಭದ್ರ ಅಡಿಪಾಯ ಹಾಕಿದರು.ನೆದರ್ಲ್ಯಾಂಡ್ಸ್ ಪರ ಬಾಸ್ ಡೆ ಲೀಡ್ 2 ವಿಕೆಟ್ ಪಡೆದರೆ, ಪೌಲ್ ಮೀಕರನ್, ವಾನ್ ಡರ್ ಮರ್ವೆ ತಲಾ ಒಂದು ವಿಕೆಟ್ ಕಬಳಿಸಿದರು.









