ಮೀರ್ಪುರ: ಭಾರತ ತಂಡವು ಭಾನುವಾರ ಬಾಂಗ್ಲಾದೇಶ ವಿರುದ್ಧ ನಡೆದ ಮಹಿಳಾ ಟಿ20 ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತದ
ಎದುರು ಆತಿಥೇಯ ಬಾಂಗ್ಲಾ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 114 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡವು ಹರ್ಮನ್ (ಔಟಾಗದೆ 54, 35ಎ, 4X6, 6X2) ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 16.2 ಓವರ್ಗಳಲ್ಲಿ 3 ವಿಕೆಟ್ಗಳಿಗೆ 118 ರನ್ ಗಳಿಸಿತು.
ಉಪ ನಾಯಕಿ ಸ್ಮೃತಿ ಮಂದಾನ (38; 34ಎ, 4X5) ಮತ್ತು ಜೆಮಿಮಾ ರಾಡ್ರಿಗಸ್ (11; 14ಎ) ಕೊಡುಗೆ ನೀಡಿದರು.