ಹೊಸದಿಲ್ಲಿ :ಏಷ್ಯನ್ ಗೇಮ್ಸ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತೀಯ ಪುರುಷರ ವಾಲಿಬಾಲ್ ತಂಡವು ದಕ್ಷಿಣ ಕೊರಿಯಾ ತಂಡದ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. 5 ಸೆಟ್ ಹೋರಾಟದಲ್ಲಿ 25-27, 29-27,25-22,20-25,17-15 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಎರಡನೇ ಜಯ ದಾಖಲಿಸಿದ
ಭಾರತ ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆಯಿತು. ಮೊದಲ ಸೆಟ್ ಸೋಲನುಭವಿಸಿದರೂ, ಕೊನೆಯ ಸೆಟ್ ಹಿನ್ನಡೆ ಅದರೂ ಭರ್ಜರಿ ಆಟದ ಮೂಲಕ ಭಾರತ ಪಂದ್ಯ ಗೆದ್ದುಕೊಂಡಿತು. ಅಮಿತ್ ಗುರಿ, ಎರಿನ್ ವರ್ಗೀಸ್ ಭರ್ಜರಿ ಹೊಡೆತ ಹಾಗೂ ಅಶ್ವಲ್ ರೈ ಎಲ್.ಎಂ.ಮನೋಜ್ ಅದ್ಭುತ ತಡೆ ಮೂಲಕ ಜಯ ತಂದರು.
ಮೊದಲ ಪಂದ್ಯದಲ್ಲಿ ಭಾರತ ಕಾಂಬೋಡಿಯಾ ತಂಡವನ್ನು 25-14, 25-13, 25-19 ಅಂತರದಿಂದ ಮಣಿಸಿತ್ತು.
ಹಾಂಗ್ ಝೌ ಗೇಮ್ಸ್ ನಲ್ಲಿ ಪುರುಷರ ವಾಲಿವಾಲ್ ನಲ್ಲಿ ಒಟ್ಟು 19 ತಂಡಗಳು ಭಾಗವಹಿಸುತ್ತಿವೆ.









