ಬೆಂಗಳೂರು: ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಉಪನಾಯಕಿ ಸ್ಮೃತಿ ಭರ್ಜರಿ ಶತಕ ಬ್ಯಾಟಿಂಗ್ ಮತ್ತು ಆಶಾ ಶೋಭನಾ ಅವರ ಪರಿಣಾಮಕಾರಿ ಬೌಲಿಂಗ್ನಿಂದ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ಎದುರು 143 ರನ್ಗಳ ಬೃಹತ್ ಜಯ ದಾಖಲಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆಯನ್ನೂ ಸಾಧಿಸಿತು. ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ
ಮಾಡಿಕೊಂಡಿತು.ಆತಿಥೇಯ ಬಳಗವು ಆರಂಭಿಕ ಆಘಾತ ಎದುರಿಸಿತು. ಕೇಲವ 55 ರನ್ಗಳಿಗೆ 3 ವಿಕೆಟ್ ಪತನವಾದವು. ಆದರೆ ಈ ಹಂತದಲ್ಲಿ ದಿಟ್ಟ ಹೋರಾಟ ನಡೆಸಿದ ಸ್ಮೃತಿ (117; 127ಎ, 4X12, 6X1) ಶತಕ ದಾಖಲಿಸಿದರು. ಇದರಿಂದಾಗಿ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 265 ರನ್ ಗಳಿಸಲು ಸಾಧ್ಯವಾಯಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 37.4 ಓವರ್ಗಳಲ್ಲಿ 122 ರನ್ಗಳಿಗೆ ಕುಸಿಯಿತು. ಸ್ಪಿನ್ನರ್ ಆಶಾ ಶೋಭನಾ (21ಕ್ಕೆ4) ಮತ್ತು ದೀಪ್ತಿ ಶರ್ಮಾ (10ಕ್ಕೆ2) ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಸ್ಮೃತಿ ಏಕದಿನ ಕ್ರಿಕೆಟ್ನಲ್ಲಿ ಆರನೇ ಶತಕ ದಾಖಲಿಸಿದರು. ದೀಪ್ತಿ ಶರ್ಮಾ (37; 48ಎ) ಹಾಗೂ ಪೂಜಾ (ಔಟಾಗದೆ 31; 42) ಮಹತ್ವದ ಕಾಣಿಕೆ ನೀಡಿದರು.