ಬೆಂಗಳೂರು:ಭಾರತ– ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಯಿತು.ಭೋಜನ ವಿರಾಮದ ವೇಳೆಗೆ ಭಾರತ ಕೇವಲ 23.5 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 34 ರನ್ಗಳಿಸಿತ್ತು. ಆದರೆ ವಿರಾಮದ
ಬಳಿಕ 31.2 ಓವರ್ಗಳಲ್ಲಿ ಭಾರತ ಸರ್ವಪತನ ಕಂಡಿತು.
ಮ್ಯಾಟ್ ಹೆನ್ರಿ ಹಾಗೂ ವಿಲಿಯಂ ಒ ರೂರ್ಕಿ ಮಾರಕ ದಾಳಿ ನಡೆಸಿ ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಸರ್ಫರಾಜ್ ಖಾನ್, ರವೀಂದ್ರ ಜಡೇಜ ಹಾಗೂ ಅಶ್ವಿನ್ ಶೂನ್ಯಕ್ಕೆ ಔಟಾದರು. ರೋಹಿತ್ ಶರ್ಮಾ 2, ಜೈಸ್ವಾಲ್ 13ಕ್ಕೆ ಔಟಾದರು. ಪಂತ್ 20 ರನ್ಗಳಿಸಿ ಔಟಾದರು.
ನ್ಯೂಜಿಲೆಂಡ್ ಪರ ಟಿಮ್ ಸೌಥಿ 1, ವಿಲಿಯಂ ಒ ರೂರ್ಕಿ 4, ಮ್ಯಾಟ್ ಹೆನ್ರಿ 5 ವಿಕೆಟ್ ಉರುಳಿಸಿದರು.