ಗೂನಡ್ಕ: ಎಸ್ ವೈ ಎಸ್ ಗೂನಡ್ಕ ಶಾಖೆ ವತಿಯಿಂದ ಸ್ವತಂತ್ರ್ಯೋತ್ಸವ ಪ್ರಯುಕ್ತ ‘ನಿನ್ನೆಯ ನೆನಪು ನಾಳೆಯ ನಿರೀಕ್ಷೆ’ ಎಂಬ ಸಂವಾದ ಕಾರ್ಯಕ್ರಮ ‘ಸ್ವತಂತ್ರ ಸಂಜೆ’ ಗೂನಡ್ಕದಲ್ಲಿ
ನಡೆಯಿತು. ಗ್ರಾಮದ ಸರ್ವ ಧರ್ಮದ ಪ್ರತಿನಿಧಿಗಳು, ನಿವೃತ್ತ ಸೈನಿಕರು, ಪ್ರಮುಖರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷತೆಯನ್ನು ಅನಿಸಿಕೆ ವ್ಯಕ್ತಪಡಿಸಿ, ಹಳೆಯ ನೆನಪುಗಳನ್ನು
ಮೆಲುಕು ಹಾಕಿದರು. ಗೂನಡ್ಕ ಎಸ್ ವೈ ಎಸ್ ಅಧ್ಯಕ್ಷ ಮುನೀರ್ ಪ್ರಗತಿ ಅಧ್ಯಕ್ಷತೆ ವಹಿಸಿದ್ದರು. ಸಂಪಾಜೆ ಗ್ರಾಮದ ಪವರ್ ಮ್ಯಾನ್ ಸಂಗಮೇಶ ಹಾಗೂ ಕೆ ಎಸ್ ಆರ್ಟಿಸಿಯ ನಿವೃತ್ತ ಚಾಲಕ, ಅಪಘಾತ ರಹಿತ ಚಾಲಕನೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಮಹಮ್ಮದ್ ಕಡೆಪಾಲ ಅವರನ್ನು ಸನ್ಮಾನಿಸಲಾಯಿತು.
ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿoಗಾಜೆ, ನಿರ್ದೇಶಕ ಗಣಪತಿ ಭಟ್, ನಿವೃತ್ತ ಸೈನಿಕ ಪದ್ಮನಾಭ ಗೌಡ ಗೂನಡ್ಕ, ಪ್ರಮುಖರಾದ ಎಸ್ ಪಿ ಲೋಕನಾಥ್, ಹನುಮಂತಪ್ಪ, ವೆಂಕಪ್ಪ ಪೆರಂಗೊಡಿ, ರಾಮಚಂದ್ರ ಕಲ್ಲುಗದ್ದೆ, ಚಿದಾನಂದ ಮಾಸ್ಟರ್, ವಸಂತ ಪೆಲ್ತಡ್ಕ , ರಂಜನ್ ಕಲ್ಲುಗದ್ದೆ, ಬಾಲಚಂದ್ರ ದರ್ಕಾಸ್,ನವೀನ ಗೂನಡ್ಕ, ಚಿದಾನಂದ ಮೂಡನ ಕಜೆ, ಮಹಮ್ಮದ್ ಕುಂಞಿ ಗೂನಡ್ಕ, ಖತೀಬರಾದ ಅಬೂಬಕ್ಕರ್ ಸಖಾಫಿ, ಸವಾದ್ ಮದನಿ, ಲತೀಫ್ ಸಖಾಫಿ ಗೂನಡ್ಕ, ಉಮರ್ ಪುತ್ರಿ, ಅಶ್ರಫ್ ದೊಡ್ಡಡ್ಕ, ಹಾರಿಸ್ ಕೆ ಎಸ್, ಮತ್ತಿತರರು ಭಾಗವಹಿಸಿದ್ದರು. ಸ್ವಭಾಹ್ ಹಿಮಮಿ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದೀಕ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು. ಜಾಬಿರ್ ಎಂ ಬಿ ವಂದಿಸಿದರು.





