ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ , ಕೆವಿಜಿ ಐಟಿಐ, ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು ಜಂಟಿಯಾಗಿ ಅ.15 ರಂದು ಸ್ವಾತಂತ್ರ್ಯೋತ್ಸವವನ್ನು ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿ ವಿರಾಜಪೇಟೆ ಪ್ರಗತಿ ಶಾಲೆಯ ಮಾಲೀಕ ಮತ್ತು ಮಾಜಿ ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಇವರು ಧ್ವಜಾರೋಹಣ ಮಾಡಿ ‘ ನಾವೆಲ್ಲ ಒಂದು
ಕನಸು ಇಟ್ಟುಕೊಂಡು ಆ ಕನಸನ್ನು ನನಸಾಗಿಸಲು ಪ್ರಯತ್ನಿಸಬೇಕು. ಇದರ ಜೊತೆಗೆ ಮಕ್ಕಳು ದೇಶಕ್ಕೆ ಗೌರವಕೊಡುವ ಕೆಲಸವನ್ನು ಮಾಡಬೇಕು ಎಂದರು.
ಶಾಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ‘ ದೇಶ ಕಟ್ಟಲು ಇಂದಿನ ವಿದ್ಯಾರ್ಥಿಗಳೇ ರೂವಾರಿಗಳು. ಆದುದರಿಂದ ವಿದ್ಯಾರ್ಥಿಗಳು ದೇಶವನ್ನು ಬಲಿಷ್ಠ ಗೊಳಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿನಿ ಅಲಿಸ್ಬ ಸಾರ ಸ್ವಾತಂತ್ರ್ಯ ಆಚರಣೆಯ ಮಹತ್ವದ ಕುರಿತು ತಿಳಿಸಿದರು .ಬಳಿಕ ಕೆವಿಜಿ ಐಪಿಎಸ್ ಮತ್ತು ಕೆವಿಜಿ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕೆವಿಜಿ ಐಪಿಎಸ್ನ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ ಆರ್, ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಬಾಳಿಲ, ಉಪ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ , ಉಪ ಪ್ರಾಂಶುಪಾಲ ಅಣ್ಣಯ್ಯ, ಗವರ್ನರ್ ಕೌನ್ಸಿಲ್ ಮೆಂಬರ್ ಭವಾನಿ ಶಂಕರ್ ಅಡ್ತಲೆ, ಕೆವಿಜಿ ದಂತ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಾಧವ ಬಿ. ಟಿ,ಮತ್ತು ಪೋಷಕ ವೃಂದ, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಕ ತೀರ್ಥ ವರ್ಣ ಬಳ್ಳಡ್ಕ ಸಹಕರಿಸಿದರು.