ಸುಳ್ಯ: ಸುಳ್ಯದಲ್ಲಿ ನಗರ ನೀರು ಸರಬರಾಜು ಯೋಜನೆಯ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆಸುತ್ತಿರುವ ಕಾರ್ಮಿಕರಿಗೆ ಉಚಿತ ಅರೋಗ್ಯ ತಪಾಸಣೆಯನ್ನು ಸುಳ್ಯದ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ನೇತೃತ್ವದಲ್ಲಿ ನಡೆಸಲಾಯಿತು. ಐಎಂಎ ಸುಳ್ಯ ಘಟಕದ
ಅಧ್ಯಕ್ಷೆ ಡಾ ವೀಣಾ, ಉಪಾಧ್ಯಕ್ಷರಾದ ಡಾ ಕರುಣಾಕರ, ಖಜಾಂಜಿ ಡಾ. ರಜನಿ, ಡಾ ವೆಂಕಟಕೃಷ್ಣ, ಹಳೇಗೇಟು ಕ್ಷೇಮ ಕೇಂದ್ರದ ಮೇಲ್ವಿಚಾರಕಿ ಕ್ರಿಸ್ಟಲ್ ಕ್ರಾಸ್, ಜ್ಯೋತಿ ಆಸ್ಪತ್ರೆ ಶುಶ್ರೂಷಕಿಯರಾದ ಚಿತ್ರ ಹಾಗೂ ಸ್ವಾತಿ, ಸರಕಾರಿ ಲ್ಯಾಬ್ ಟೇಕ್ನಿಶಿಯನ್ ಭಾರತಿ ಎಂ. ಸಂಪೂರ್ಣ ಉಚಿತವಾಗಿ ಅರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು. ಕಾರ್ಮಿಕರ ಮಕ್ಕಳಿಗೆ ಬೇಕಾದ ಪ್ರೊಟೀನ್ ಆಹಾರ, ತಾಯಂದಿರಿಗೆ ಮತ್ತು ಮಕ್ಕಳಿಗೆ ಬೇಕಾದ ವಿಟಮಿನ್, ಹಾಗೂ ಎಲ್ಲರಿಗೂ ಅಗತ್ಯವಿರುವ ಔಷಧಿ ಗಳನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮವನ್ನು ನ ಪಂ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸಂಘಟಿಸಿ ನ ಪಂ ಸದಸ್ಯ ಬುದ್ಧ ನಾಯ್ಕ್ ಸಹಕರಿಸಿದರು.









