ಸುಳ್ಯ:ಭಾರತೀಯ ವೖದ್ಯಕೀಯ ಸಂಘದ ಸುಳ್ಯ ಶಾಖೆಯ ನೂತನ ಅಧ್ಯಕ್ಷರಾಗಿ ಡಾ.ಐಶ್ವರ್ಯ ಕೆ.ಸಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ಪದಾಧಿಕಾರಿಗಳ
ಪದಗ್ರಹಣ ಸಮಾರಂಭ ಕೆ. ವಿ. ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಸುಶ್ರೂತ ಸಭಾಂಗಣದಲ್ಲಿ ನಡೆಯಿತು. ಐಎಂಎ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರು ಮತ್ತು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಸದಸ್ಯರಾದ
ಡಾ. ವೀರಭದ್ರಯ್ಯ. ಟಿ. ಎ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸುಳ್ಯ ಶಾಖೆಯ ಸ್ಥಾಪಕ ಅಧ್ಯಕ್ಷರು, ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಐಎಂಎ ಕೆಎಸ್ಬಿಯ ಹಿರಿಯ ಉಪಾಧ್ಯಕ್ಷರಾದ ಡಾ. ಮೋಹನ್ ಅಪ್ಪಾಜಿ, ಐಎಂಎ ಕರ್ನಾಟಕ ಉಪಾಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್, ಐಎಂಎ ಕೆಎಸ್ ಬಿ ಯ ಸಹಾಯಕ ಕಾರ್ಯದರ್ಶಿ ಡಾ. ಮಹೇಶ್ ಭಟ್, ಮತ್ತು ದಕ್ಷಣಕನ್ನಡ, ಉಡುಪಿ, ಚಿಕ್ಕಮಗಳೂರು ವಿಭಾಗ ಸಯೋಜಕರಾದ ಡಾ.ಜಿ.ಕೆ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

2025-26ನೇ ಸಾಲಿನ ಅಧ್ಯಕ್ಷರಾಗಿ ಡಾ. ಐಶ್ವರ್ಯ ಕೆ. ಸಿ ಆಧಿಕಾರ ಸ್ವೀಕರಿಸದರೆ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಗೀತಾ ಜೆ ದೊಪ್ಪ,ಉಪಾಧ್ಯಕ್ಷರಾಗಿ ಡಾ. ಅರುಣ ಸಿ. ಆರ್, ಕೋಶಾಧಿಕಾರಿಯಾಗಿ ಡಾ. ಸಾಯಿಗೀತಾ ಜ್ನಾನೇಶ್, ಜತೆಕಾರ್ಯದರ್ಶಿಯಾಗಿ ಡಾ. ಶೃತಿ ಪಿ ರೈ ಜೊತೆ ಕೋಶಾಧಿಕಾರಿಯಾಗಿ ಡಾ. ನಮೃತಾ ಕೆ. ಜಿ, ರಾಜ್ಯ ಕೌನ್ಸಿಲ್ ಸದಸ್ಯರಾಗಿ ಡಾ. ನಂದಕುಮಾರ್.ಬಿ, ಡಾ. ಹಿಮಕರ ಕೆ.ಎಸ್, ಡಾ. ರಂಜಿತ್ ಕೆ. ಬಿ ಮತ್ತು ಕೇಂದ್ರ ಕೌನ್ಸಿಲ್ ಸದಸ್ಯರಾಗಿ ಡಾ. ಜೆ. ಪಿ ಪಾರೆ, ಡಾ ಭರತ್ ಶೆಟ್ಟಿ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ. ಅಪೂರ್ವ ದೊರೆ, ಉಪಾಧ್ಯಕ್ಷರಾಗಿ ಡಾ. ಅಂಜಲಿ ರಾವ್, ಎಎಮ್ಎಸ್ ಘಟಕದ ಅಧ್ಯಕ್ಷರಾಗಿ ಡಾ. ರವಿಕಾಂತ್ ಜಿ. ಒ ಕಾರ್ಯದರ್ಶಿಯಾಗಿ ಡಾ. ಭವಾನಿಶಂಕರ್ ಹೆಚ್. ಆರ್ ಎಕ್ಸಿಕ್ಯುಟಿವ್ ಸಮಿತಿ ಸದಸ್ಯರಾಗಿ ಡಾ. ಕೆ. ವಿ. ಚಿದಾನಂದ, ಡಾ. ಸಿ. ಆರ್ ಭಟ್, ಡಾ. ಸುಬ್ರಹ್ಮಣ್ಯ ಯಂ. ಪಿ, ಡಾ. ಗಣೇಶ್ ಶರ್ಮಾ, ಡಾ. ಉಮಾಶಂಕರ್ ಬೋರ್ಕರ್ ಆಯ್ಕೆಯಾದರು.
ನಿರ್ಗಮಿತ ಅಧ್ಯಕ್ಷರಾದ ಡಾ. ವೀಣಾ. ಎನ್ ಸ್ವಾಗತಿಸಿ
ನೂತನ ಕಾರ್ಯದರ್ಶಿ ಡಾ. ಗೀತಾ ಜೆ ದೊಪ್ಪ ವಂದಿಸಿದರು.
ಡಾ. ನವ್ಯ ರಂಗನಾಥ್, ಡಾ.ಶೃತಿ. ಪಿ ರೖ ಕಾರ್ಯಕ್ರಮ ನಿರೂಪಿಸಿದರು.





