ಸುಳ್ಯ:ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಗ್ನೈಟ್ ಎಂಬ ಹೊಸ ಕ್ಲಬ್ನ್ನು ಉದ್ಘಾಟಿಸಲಾಯಿತು. ಇದು ವಿದ್ಯಾರ್ಥಿಗಳನ್ನು ಉದ್ಯೋಗ ನೇಮಕಾತಿ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಚಟುವಟಿಕೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯಕ್ರಮವು ಕಾಲೇಜಿನ ಮೆಗಾ ಲ್ಯಾಬ್ನಲ್ಲಿ ನಡೆಯಿತು. ಇಗ್ನೈಟ್ ಅಧ್ಯಕ್ಷರಾಗಿರುವ ೪ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿದ್ಯಾರ್ಥಿ ನಂದನ್ಕೃಷ್ಣ ಉದ್ಘಾಟನಾ ಭಾಷಣ ನೀಡಿದರು. ಕ್ಲಬ್ನ್ನು ಉದ್ಘಾಟಿಸಿದ
ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ.ಯವರು ನಿರಂತರ ಸ್ವಯಂ ಸುಧಾರಣೆ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಸಂವಹನ ಕೌಶಲ್ಯ ಉತ್ತೇಜನದ ಅವಶ್ಯಕತೆ ಕುರಿತು ಮಾತನಾಡಿದರು. ಪ್ರಾಂಶುಪಾಲ ಡಾ. ಸುರೇಶ ವಿ, ಉಪಪ್ರಾಂಶುಪಾಲರು ಹಾಗೂ ಗಣಿತ ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ. ಮಾತನಾಡಿದರು.

ಕ್ಲಬ್ನ ಮೆಂಟರ್ ಪ್ರೊ. ವೆಂಕಟೇಶ್ ಯು.ಸಿ., ಉಪಾಧ್ಯಕ್ಷ ದರ್ಶನ್ ಆಳ್ವ, ಡೀನ್ ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್. ಹಾಗೂ ಡೀನ್ ರೀಸರ್ಚ್ ಮತ್ತು ವಿಭಾಗ ಮುಖ್ಯಸ್ಥರು ವಿಭಾಗ ಡಾ. ಸವಿತಾ ಸಿ.ಕೆ. ಉಪಸ್ಥಿತರಿದ್ದರು. ಅನನ್ಯ ನಾಮಧಾರ ಧನ್ಯವಾದ ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಜ್ಞಾನಸಿರಿ ಕೆ.ಕೆ. ನಿರ್ವಹಿಸಿದರು. ಕ್ಲಬ್ನ ಮೊದಲ ಚಟುವಟಿಕೆಯಾಗಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು. ಇದರಲ್ಲಿ ಪ್ರಣಮ್ಯ ಪ್ರಥಮ ಸ್ಥಾನವನ್ನು ಗಳಿಸಿದರು. ಪ್ರಶಸ್ತಿಯನ್ನು ಪ್ರೊ. ವೆಂಕಟೇಶ್ ಯು.ಸಿ ಯವರು ವಿತರಿಸಿದರು.









