ಬೆಂಗಳೂರು: ಭಾರತದಲ್ಲಿ ನಡೆಯಲಿರುವ ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಿಡುಗಡೆ ಮಾಡಿದೆ. ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ನಡೆಯುವ ಈ ಟೂರ್ನಿಯು ದೇಶದ 10 ನಗರಗಳಲ್ಲಿ ನಡೆಯಲಿದ್ದು, ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಆಯೋಜನೆಗೊಳ್ಳಲಿದೆ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್
ಇಂಗ್ಲೆಂಡ್ ಮತ್ತು ರನ್ನರ್ಸ್ ಅಪ್ ನ್ಯೂಜಿಲೆಂಡ್ ಕಣಕ್ಕಿಳಿಯಲಿವೆ.
ವಿಶ್ವಕಪ್ನ ಆತಿಥ್ಯ ವಹಿಸಿರುವ ಭಾರತ ಅಕ್ಟೋಬರ್ 8ರಂದು ತನ್ನ ಮೊದಲ ಪಂದ್ಯ ಆಡಲಿದೆ. ಈ ಹಣಾಹಣಿಯು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಚೆನ್ನೈನಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಮೊದಲ ಎಂಟು ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿವೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಗಳು ಮುಗಿದ ಬಳಿಕ ಉಳಿದೆರಡು ತಂಡಗಳು ಯಾವುವು ಎಂಬುದು ಗೊತ್ತಾಗಲಿದೆ.
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನ ನೇರವಾಗಿ ಟೂರ್ನಿಯಲ್ಲಿ ಆಡಲಿವೆ. ಉಳಿದೆರಡು ಸ್ಥಾನಕ್ಕಾಗಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ಹಾಗೂ ಇತರ ತಂಡಗಳು ಪೈಪೋಟಿ ನಡೆಸುತ್ತಿವೆ. ಪ್ರತಿ ತಂಡ ತಲಾ 9 ಪಂದ್ಯಗಳನ್ನು ಆಡಲಿದೆ. ಅಗ್ರ 4 ಸ್ಥಾನಗಳಲ್ಲಿ ಉಳಿಯುವ ತಂಡಗಳು ಸೆಮಿಫೈನಲ್ ಟಿಕೆಟ್ ಗಿಟ್ಟಿಸಲಿವೆ.
2023ರ ವಿಶ್ವಕಪ್ ಗೆ ಭಾರತ ತಂಡದ ವೇಳಾಪಟ್ಟಿ:
ಅಕ್ಟೋಬರ್ 8:
ಭಾರತ vs ಆಸ್ಟ್ರೇಲಿಯ, ಚೆನ್ನೈ
ಅಕ್ಟೋಬರ್ 11:
ಭಾರತ vs ಅಫ್ಘಾನಿಸ್ತಾನ , ಹೊಸದಿಲ್ಲಿ
ಅಕ್ಟೋಬರ್ 15:ಅಹಮದಾಬಾದ್
ಭಾರತ vs ಪಾಕಿಸ್ತಾನ ,
ಅಕ್ಟೋಬರ್ 19, ಪುಣೆ:
ಭಾರತ vs ಬಾಂಗ್ಲಾದೇಶ,
ಅಕ್ಟೋಬರ್ 22, ಧರ್ಮಶಾಲಾ:
ಭಾರತ vs ನ್ಯೂಝಿಲ್ಯಾಂಡ್ ,
ಅಕ್ಟೋಬರ್ 29, ಲಕ್ನೋ:
ಭಾರತ vs ಇಂಗ್ಲೆಂಡ್,
ನವೆಂಬರ್ 2, ಮುಂಬೈ:
ಭಾರತ vs ಕ್ವಾಲಿಫೈಯರ್-2,
ನವೆಂಬರ್ 5, ಕೋಲ್ಕತ್ತಾ
ಭಾರತ vs ದಕ್ಷಿಣ ಆಫ್ರಿಕಾ,
ನವೆಂಬರ್ 11, ಬೆಂಗಳೂರು.
ಭಾರತ vs ಕ್ವಾಲಿಫೈಯರ್-1 ,