ಪುಣೆ: ಐಸಿಸಿ ವಿಶ್ವಕಪ್ನಲ್ಲಿ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬೆಳಗ್ಗೆ 10:30ಕ್ಕೆ ಶುರುವಾಗಲಿರುವ ಮೊದಲ ಮ್ಯಾಚ್ನಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಲಿದೆ.ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ಎರಡೂ ತಂಡಕ್ಕೆ ಇದೊಂದು ಔಪಚಾರಿಕ ಪಂದ್ಯವಷ್ಟೆ. ಆಸೀಸ್ ಈಗಾಗಲೇ ಸೆಮೀಸ್ಗೆ ಲಗ್ಗೆಯಿಟ್ಟಿದ್ದರೆ ಬಾಂಗ್ಲಾ
ಟೂರ್ನಿಯಿಂದ ಔಟ್ ಆಗಿದೆ. ಹೀಗಾಗಿ ಈ ತಂಡದ ಫಲಿತಾಂಶ ವಿಶ್ವಕಪ್ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಬಾಂಗ್ಲಾದೇಶಕ್ಕೆ ಇಂದು ಗೆಲುವು ಅನಿವಾರ್ಯ. 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಬಾಂಗ್ಲಾ ಗೆಲ್ಲಬೇಕಾಗಿದೆ. 8 ಪಂದ್ಯಗಳಿಂದ 4 ಅಂಕ ಗಳಿಸಿರುವ 8ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಇಂದು ಗೆದ್ದು 7 ಸ್ಥಾನದೊಳಗೆ ಬಂದರೆ ಮಾತ್ರ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಪಡೆಯಬಹುದು. ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಪಿಯಲ್ಲಿ ವಿಶ್ವಕಪ್ನ ಮೊದಲ ಎಂಟು ಸ್ಥಾನಿಗಳು ಅರ್ಹತೆ ಪಡೆಯಲಿದ್ದಾರೆ. ಅತಿಥೇಯ ಪಾಕಿಸ್ಥಾನ ಹಾಗೂ ಇತರ ಏಳು ಸ್ಥಾನಿಗಳು ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಇಂದಿನ ಪಂದ್ಯದಲ್ಲಿ
ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಅಬ್ಬರಿಸಿ ದ್ವಿಶತಕ ಸಿಡಿಸಿದ್ದ ಗ್ಲೆನ್ ಮ್ಯಾಕ್ಸ್ವೆಲ್ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇತ್ತ ಬಾಂಗ್ಲಾ ಶಕೀಬ್ ಅಲ್ ಹಸನ್ ಸೇವೆ ಕಳೆದುಕೊಂಡಿದೆ.









