ಕರಾಚಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿದೆ. 8 ವರ್ಷಗಳ ಬಳಿಕ ಆಯೋಜನೆಗೊಳ್ಳುತ್ತಿರುವ ಈ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎಂಟು ತಂಡಗಳು ಸಜ್ಜಾಗಿವೆ.
ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಗಿರುವ ಪಾಕಿಸ್ತಾನ, ಪ್ರಶಸ್ತಿ ಉಳಿಸಿಕೊಳ್ಳಲು ಏಳು ಬಲಿಷ್ಠ ತಂಡಗಳೊಂದಿಗೆ ಸೆಣಸಾಡಬೇಕಿದೆ. ಟೂರ್ನಿಯು ಫೆಬ್ರುವರಿ 19ರಂದು ಆರಂಭವಾಗಲಿದೆ. ಕರಾಜಿ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುವ
ಮೊದಲ ಪಂದ್ಯದಲ್ಲಿ ಆತಿಥೇಯರಿಗೆ ನ್ಯೂಜಿಲೆಂಡ್ ಸವಾಲೊಡ್ಡಲಿದೆ.ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಂಟು ತಂಡಗಳು ಎರಡು ಗುಂಪುಗಳಾಗಿ ತಲಾ ಮೂರು ಪಂದ್ಯಗಳನ್ನು ಆಡಲಿವೆ. ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ ತಂಡಗಳಿಗೆ ಸೆಮಿಫೈನಲ್ ಟಿಕೆಟ್ ಸಿಗಲಿದೆ.
‘ಎ’ ಗುಂಪಿನಲ್ಲಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಇವೆ. ‘ಬಿ’ ಬಳಗದಲ್ಲಿ ಅಫ್ಗಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.
ಸೆಮಿಫೈನಲ್ ಮತ್ತು ಫೈನಲ್ ಸೇರಿ, ಒಟ್ಟು 15 ಪಂದ್ಯಗಳು ನಡೆಯಲಿವೆ.
ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿರುವ ಭಾರತ, ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಉಳಿದಂತೆ, ಪಾಕಿಸ್ತಾನದ ಲಾಹೋರ್ನಲ್ಲಿ ನಾಲ್ಕು, ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ತಲಾ ಮೂರು ಪಂದ್ಯಗಳು ನಡೆಯಲಿವೆ.ಮೊದಲ ಸೆಮಿಫೈನಲ್ ದುಬೈನಲ್ಲಿ (ಮಾರ್ಚ್ 4ರಂದು) ಹಾಗೂ ಎರಡನೇ ಸೆಮಿಫೈನಲ್ ಲಾಹೋರ್ನಲ್ಲಿ (ಮಾರ್ಚ್ 5ರಂದು) ನಿಗದಿಯಾಗಿವೆ. ಮಾರ್ಚ್ 7ರಂದು ನಡೆಯುವ ಫೈನಲ್ಗೆ ಇನ್ನಷ್ಟೇ ಸ್ಥಳ ಅಂತಿಮವಾಗಬೇಕಿದೆ.
ಟೂರ್ನಿಯಲ್ಲಿ ಆಡುವ ಎಲ್ಲ ಎಂಟು ತಂಡಗಳ ಪಂದ್ಯಗಳು.
‘ಎ’ ಗುಂಪು
ಫೆಬ್ರುವರಿ 20: ಭಾರತ Vs ಬಾಂಗ್ಲಾದೇಶ (ದುಬೈ)
ಫೆಬ್ರುವರಿ 23: ಭಾರತ Vs ಪಾಕಿಸ್ತಾನ (ದುಬೈ)
ಮಾರ್ಚ್ 2: ಭಾರತ Vs ನ್ಯೂಜಿಲೆಂಡ್ (ದುಬೈ)
ಫೆಬ್ರುವರಿ 24: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ರಾವಲ್ಪಿಂಡಿ)
ಫೆಬ್ರುವರಿ 27: ಭಾಂಗ್ಲಾದೇಶVs ಪಾಕಿಸ್ತಾನ (ರಾವಲ್ಪಿಂಡಿ)
ಫೆಬ್ರುವರಿ 19: ನ್ಯೂಝಿಲೆಂಡ್Vs ಪಾಕಿಸ್ತಾನ (ಕರಾಚಿ)
‘ಬಿ’ ಗುಂಪು
ಫೆಬ್ರುವರಿ 21: ಅಫಘಾನಿಸ್ಥಾನ Vs ದಕ್ಷಿಣ ಆಫ್ರಿಕಾ (ಕರಾಚಿ)
ಫೆಬ್ರುವರಿ 26: ಅಫಘಾನಿಸ್ಥಾನ Vs ಇಂಗ್ಲೆಂಡ್ (ಲಾಹೋರ್)
ಫೆಬ್ರುವರಿ 28: Vsಅಫಘಾನಿಸ್ಥಾನ ಆಸ್ಟ್ರೇಲಿಯಾ (ಲಾಹೋರ್)
ಫೆಬ್ರುವರಿ 22: ಆಸ್ಟ್ರೇಲಿಯಾ Vs ಇಂಗ್ಲೆಂಡ್ (ಲಾಹೋರ್)
ಫೆಬ್ರುವರಿ 25: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ರಾವಲ್ಪಿಂಡಿ)
ಮಾರ್ಚ್ 1:ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ (ಕರಾಚಿ)