ಮಂಗಳೂರು: ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಇದೇ ಸೆ.5 ಮತ್ತು 6 ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ವಿವರ ಇಂತಿದೆ:ಅವರು ಸೆ.05ರ ಮಂಗಳವಾರ ಬೆಳಗ್ಗೆ 6.20ಕ್ಕೆ ಮಂಗಳೂರಿಗೆ ಆಗಮಿಸುವರು. 6.45ಕ್ಕೆ ಸಕ್ರ್ಯೂಟ್ ಹೌಸಿಗೆ ತೆರಳುವರು. 8.30ಕ್ಕೆ ಹಾಜಿ ಯೆನಪೋಯ ಅಬ್ದುಲ್ ಕುಂಞಿ ಅವರು ಆಯೋಜಿಸಿರುವ ಅಲ್ಪಸಂಖ್ಯಾತರ ಸಮುದಾಯದ
ಮುಖಂಡರೊಡನೆ ಚರ್ಚೆ ನಡೆಸುವರು. 9 ಗಂಟೆಗೆ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಫಿಜಿಯೋಕಾನ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ ಮಿತ್ತೂರಿನ ಇಡ್ಕಿದು ಗ್ರಾಮದಲ್ಲಿ ದಾರುಲ್ ಇರ್ಷಾದ್ ಆವರಣದಲ್ಲಿ ಪ್ರಧಾನ ಮಂತ್ರಿ ಜನ ವಿಕಾಸ ಯೋಜನೆಯಡಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
2.30ಕ್ಕೆ ಮಂಗಳೂರಿಗೆ ಆಗಮಿಸಿ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು, ಸಂಜೆ 4 ಗಂಟೆಗೆ ಟೌನ್ಹಾಲ್ನಲ್ಲಿ ಜಿಲ್ಲಾ ಅಭಿನಂದನಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 7 ಗಂಟೆಗೆ ಉಳ್ಳಾಲದ ತೂಕಟ್ಟು ಹಳೆಪೇಟೆ ಮೀನು ಮಾರುಕಟ್ಟೆ ಕೊಳಚೆ ಪ್ರದೇಶಕ್ಕೆ ಭೇಟಿ ನೀಡುವರು. 7.30ಕ್ಕೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡುವರು. ರಾತ್ರಿ 8 ಗಂಟೆಗೆ ಸಕ್ರ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಮಾಡುವರು.
ಸೆ.6ರ ಬುಧವಾರ ಬೆಳಿಗ್ಗೆ 9.30 ರಿಂದ 11 ಗಂಟೆ ವರೆಗೆ ಪ್ರಸ್ತಾಪಿತ ಹಜ್ ಭವನ ಸ್ಥಳ ಪರಿಶೀಲನೆ ನಡೆಸುವರು. 11.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ನಗರ ಸ್ಥಳೀಯ ಸಂಸ್ಥೆಗಳ ಇಂದಿರಾ ಕ್ಯಾಂಟೀನ್ ಸೈಟ್, ನಗರೋತ್ಥಾನ ಕಾಮಗಾರಿಗಳ ಪರಿಶೀಲನೆ ನಡೆಸುವುದು. 2 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.